ಪ್ರವಾಸೋದ್ಯಮ ಇಲಾಖೆಯ ಎಡವಟ್ಟಿನಿಂದ ಹಂಪಿಯಲ್ಲಿ ಅನಾಹುತ..!

ಪ್ರವಾಸೋದ್ಯಮ ಇಲಾಖೆಯ ಎಡವಟ್ಟಿನಿಂದ ಹಂಪಿಯಲ್ಲಿ ಅನಾಹುತ..!

ವಿಜಯನಗರ: ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸಿ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಎಂದರೆ ಅದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಹಂಪಿ.

ಹೌದು, ವಿಶ್ವವಿಖ್ಯಾತಿಯನ್ನು ಗಳಿಸಿರುವ ಹಂಪಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಲ್ಲಿರುವಂತಹ ಕಲ್ಲಿನ ಶಿಲೆಗಳು ಮತ್ತು ಕಲ್ಲಿನ ರದ್ದಗಳು ವಿಶ್ವದಾದ್ಯಂತ ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡುತ್ತವೆ.

ಇನ್ನು ವಿಶ್ವ ವಿಖ್ಯಾತಿಯನ್ನು ಪಡೆದಿರುವ ಹಂಪಿ ಈಗ ನಶಿಸಿ ಹೋಗುತ್ತಿದೆ ಎಂಬ ಭಯ ಎಲ್ಲಾ ಪ್ರವಾಸಿಗರನ್ನು ಕಾಡುತ್ತಿದೆ. ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅದರಲ್ಲೂ ಕೂಡ ವಿಜಯನಗರ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.  ಇದನ್ನೂ ಓದಿ: ಆಲಿಯಾ ಭಟ್​ಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಚೀಮಾರಿ ಹಾಕಿದ್ಯಾಕೆ…?!

ಕಳೆದ ವಾರ ಹಂಪಿಯಲ್ಲಿ ಹೆಚ್ಚಾಗಿ ಮಳೆ ಆಗಿರುವುದರಿಂದ ವಿಜಯನಗರದ ಸಾಮ್ರಾಜ್ಯದ ಗತಿ ವೈಭವವನ್ನು ಸಾರಿ ಹೇಳುವ ಮಂಟಪಗಳು ಕುಸಿದು ಬೀಳುತ್ತಿವೆ ಇದರಿಂದ ಪ್ರವಾಸಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ.

ಮಳೆ ಅವಾಂತರಕ್ಕೆ ಸಾಲು ಮಂಟಪಗಳು ನೆಲಕ್ಕುರುಳಿವೆ. ವಿರೂಪಾಕ್ಷ ಬಜಾರ್​ನಲ್ಲಿರುವ ಕಲ್ಲಿನ ಮಂಟಪ ಕುಸಿತವಾಗಿದೆ.

ಮಂಟಪದ ಸುತ್ತ ಮಳೆ ನೀರು ಸಂಗ್ರಹವಾಗುವ ಹಿನ್ನೆಲೆಯಲ್ಲಿ ಮಂಟಪಗಳ ಅಡಿಪಾಯ ಸಡಿಲವಾಗಿದ್ದು, 8 ಕಂಬಗಳ ಕಲ್ಲಿನ ಮಂಟಪ ಕುಸಿದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೀಘ್ರವೇ ಮಂಟಪ ಸರಿಪಡಿಸುವಂತೆ ಜನರು ಒತ್ತಾಯಿಸಿದ್ದಾರೆ.

ಹಂಪಿಯಲ್ಲಿ ಮಂಟಪಗಳ ಜೀರ್ಣೋದ್ಧಾರ ಮತ್ತು ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮಾತ್ರ ಈ ಹಣವನ್ನು ಸರಿಯಾಗಿ ಉಪಯೋಗ ಮಾಡುತ್ತಿಲ್ಲ ಅಂತ ಜನರು ಆರೋಪಿಸಿದ್ದಾರೆ.

Related