ಧಾರ್ಮಿಕ ಭಾವನೆಗೆ ಧಕ್ಕೆ- ವ್ಯಕ್ತಿಗೆ ಜೈಲು

ಧಾರ್ಮಿಕ ಭಾವನೆಗೆ ಧಕ್ಕೆ- ವ್ಯಕ್ತಿಗೆ ಜೈಲು

ಸಿಂಗಪುರ: ‘ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ 53 ವರ್ಷದ ಭಾರತೀಯ  ವ್ಯಕ್ತಿಗೆ ಸಿಂಗಪುರದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ’ ಎಂದು ಸ್ಟ್ರೇಟ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ

‘ಜೂನ್ 30ರಂದು ಜಸ್ವಿಂದರ್ ಸಿಂಗ್ ಎಂಬಾತ ಮದ್ಯ ಸೇವಿಸಿ ಸಾರ್ವಜನಿಕ ಬಸ್ ಹತ್ತಿದ್ದಾನೆ. ಈ ವೇಳೆ ಅವನು ಮಾಸ್ಕ್ ಅನ್ನು ಕೂಡ ಸರಿಯಾಗಿ ಧರಿಸಿರಲಿಲ್ಲ. ಬಳಿಕ ಬಸ್ ಚಾಲಕನಿಗೆ ತೊಂದರೆ ಕೊಡಲು ಆರಂಭಿಸಿದ್ದಾನೆ. ಈ ವೇಳೆ ಚಾಲಕನ ಧರ್ಮ ಮತ್ತು ತಾಯಿಯನ್ನು ನಿಂದಿಸಿದ್ದಲ್ಲದೇ, ಅವರನ್ನು ಭಯೋತ್ಪಾದಕ ಎಂದು ಅವಮಾನಿಸಿದ್ದಾರೆ’ ಎಂದು ತಿಳಿದು ಬಂದಿದೆ.

ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯವು ಆತನಿಗೆ 13 ವಾರ, 12 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

Related