ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ದೀಕ್ಷಾ ರಜತ ಮಹೋತ್ಸವ

ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ದೀಕ್ಷಾ ರಜತ ಮಹೋತ್ಸವ

ಬೆಂಗಳೂರು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ಮಹೋತ್ಸವ ಪಟ್ಟಾಭಿಷೇಕದ 14 ನೇ ವಾರ್ಷಿಕೋತ್ಸವವನ್ನ ಭೋವಿ ಸಮಾಜದಿಂದ ಚಿತ್ತದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು,ಇದರ ರೂಪುರೇಷುಗಳ ಬಗ್ಗೆ ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ಧರಾಮೇಶ್ವರ ಶ್ರೀ ಸ್ವಾಮೀಜಿ, ಮುಂದಿನ ಹತ್ತು ವರ್ಷದಲ್ಲಿ ನಮ್ಮ ಸಮುದಾಯ ಎಲ್ಲಾ ಸಮುದಾಯದ ಸರಿಸಮಾನಾಗಿ ನಿಲ್ಲುತ್ತೇವೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅರ್ಥಿಕವಾಗಿ ರಾಜಕೀಯವಾಗಿ ಎಲ್ಲಾ ಸಮುದಾಯದ ಸರಿಸಮನಾಗಿ ನಿಲ್ಲುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಭೋವಿ ಸಮುದಾಯ ಎಲ್ಲಾ ರೀತಿಯ ನಿರ್ಣಯಕ ಪಾತ್ರವಹಿಸುತ್ತೆ. ನಮ್ಮ ಸಮುದಾಯವನ್ನ ಪ್ರಗತಿಯತ್ತ ಕೊಂಡೊಯ್ಯಲು ಜಾಗೃತಿ ಮೂಡಿಸುವ ಕೆಲಸವಾಗುತ್ತೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಮಾತನಾಡಿ, ರಾಜ್ಯದಲ್ಲಿ ಭೋವಿ ಸಮಾಜ ಸಂಘಟನೆಯಾಗಿದೆ. ರಾಷ್ಟ್ರಮಟ್ಟದ  ಸಂಘಟನೆಯಲ್ಲಿ ಕೆಲಸ ಮಾಡಲು ಬೋವಿ ಸಮಾಜ ರೆಡಿಯಾಗಿದೆ. ನಮ್ಮ ಸಮಾಜದ ಸಂಘಟನೆಗಳಗೆ  ಹೆಚ್ಚು ಒತ್ತು ಕೊಡಬೇಕು. ಎಲ್ಲಾ  ಸಮುದಾಯದವರು ಹೇಗೆ ಕೆಲಸ ಮಾಡುತ್ತಿದ್ದಾರೋ  ಹಾಗೇ  ನಮ್ಮ ಸಮಾಜ  ಕೆಲಸ ಮಾಡಲು ಸಿದ್ಧವಾಗಿದೆ. ಪ್ರತಿ  ಬಾರಿ ಸಮುದಾಯದ  ಜನರನ್ನು ಒಗ್ಗೂಡಿಸುವ ಹಾಗೂ ಅಭಿವೃದ್ದಿ ಕುರಿತು ಚರ್ಚಿಸುವ, ಸಾಂಸ್ಕೃತಿಕ  ಹಬ್ಬವಾಗಿ ಮಹೋತ್ಸವ ಆಚರಿಸುತ್ತಾ ಬರಲಾಗುತ್ತಿದೆ. ಇದೆ ವೇಳೆ ಎಸ್‌ಎಸ್‌ ಎಲ್‌ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಐಎಎಸ್‌, ಕೆಎಎಸ್‌, ಪಿಎಚ್‌ಡಿ ಸೇರಿ ಉನ್ನತ  ವ್ಯಾಸಂಗ ಪಡೆದ ಪ್ರತಿಭಾಂತರಿಗೆ  ಸನ್ಮಾನಿಸಲಾಗುವುದು ಎಂದರು. ಇನ್ನು ವಧು-ವರರ ಸಮಾವೇಶ, ರಕ್ತದಾನ ಶಿಬಿರ, ಸಚಿವರು ಹಾಗೂ ಸಮುದಾಯದ ಜನಪ್ರತಿನಿಧಿಗಳಿಗೆ ಆಯೋಜಸಲಾಗಿದೆ ಎಂದರು. ಇದನ್ನೂ ಓದಿ: ಸಿಎಂ ಪರ ಬ್ಯಾಟ್ ಬೀಸಿದ ಹೆಚ್‌ಸಿ ಮಹಾದೇವಪ್ಪ

ನಂತರ ಮಾತನಾಡಿದ ಮಾಜಿ ಶಾಸಕ ಅರವಿಂದ ಲಿಂಬಾವಳಿಯವರು, ಸಿದ್ಧರಾಮೇಶ್ವರ ಶ್ರೀಗಳು ದಿಕ್ಷ ರಜತಾ ಮಹೋತ್ಸವದ ಬಗ್ಗೆ ವಿವರಿಸಿರು. ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದ ಆನೇಕ ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ.

ಇನು ಮಹೋತ್ಸವನ್ನ ಸಮಾರಂಭವನ್ನು ಸಿಎಂ ಸಿದ್ಧರಾಮಯ್ಯನವರು ಉದ್ಘಾಟಿಸಿದ್ದಾರೆ. ಹಾಗೇಯೆ ಗ್ರಂಥಗಳ ಬಿಡುಗಡೆಯನ್ನ ಡಿಸಿಎಂ ಡಿ.ಕೆ ಶಿವಕುಮಾರ್‌ರವರು ಉದ್ಘಾಟನೆ  ಮಾಡಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಕೇಂದ್ರ ಸಚಿವರುಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತು  ವಿ. ಸೋಮಣ್ಣ ಭಾಗವಹಿಸಿಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾರು ಸಾಧನೆಯನ್ನ ಮಾಡಿದ್ದಾರೆ, ಶಾಸಕರುಗಳಿಗೆ, ಲೋಕಸಭೆ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನ ಏರ್ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ, ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಗಳು ಹಾಗೂ ಸಚಿವರಾದ ಶಿವರಾಜ ತಂಗಡಗಿ , ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಎಸ್ ರವಿಕುಮಾರ್ ಭಾಗಿಯಾಗಿದ್ದರು.

Related