ಕೃತಜ್ಞತಾ ಸಮಾರಂಭ

ಕೃತಜ್ಞತಾ ಸಮಾರಂಭ

 ಬೆಂಗಳೂರು: 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಹುಮತಗಳ ಅಂತರದಲ್ಲಿ ಸತತ ಎರಡನೇ ಬಾರಿಗೆ  ಸಂಸದರಾಗಿ ತ್ಯೇಜಸ್ವಿ ಸೂರ್ಯ ಅವರು ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಹುಮತಗಳ ಅಂತರದಲ್ಲಿ ಗೆದ್ದಿರುವ ತೇಜಸ್ವಿ ಸೂರ್ಯ ಅವರು ಮಹಾಜನತೆ ಮತ್ತು ಮತದಾರ ಬಂಧುಗಳಿಗೆ ಕೃತಜ್ಞತಾ ಸಮಾರಂಭವನ್ನು ಏರ್ಪಡಿಸಿದ್ದರು.

ಇಂದು (ಜೂನ್ 23 ಮಂಗಳವಾರ) ಪುಟ್ಟೇನಹಳ್ಳಿ ಸಂಸ್ಕೃತ ಭವನದಲ್ಲಿ ಅಭಿನಂದನಾ ಸಮಾರಂಭದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ರಾಮ್ ಮೂರ್ತಿ ರವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತೊಮ್ಮೆ ತೇಜಸ್ವಿ ಸೂರ್ಯ ಅವರನ್ನು ಸಂಸದರಾಗಿ ಆಯ್ಕೆ ಮಾಡಿರುವ ಮತದಾರ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: BJP-JDS ಒಂದಾಗಿ ಆಡಳಿತ ಪಕ್ಷದ ಸೊಕ್ಕು ಮುರಿಯುತ್ತೇವೆ: ಬಿವೈವಿ

ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಜೆಲ್ಲಿ ರಮೇಶ್, ಪ್ರತಿಭಾರಮೇಶ್, ಮುನಿರಾಮ ಭಾಗ್ಯ ಲಕ್ಷ್ಮಿ ಮುರಳಿ, ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Related