ಕೇಂದ್ರ ಸರ್ಕಾರದ ಕಳಪೆ ಕಾಮಗಾರಿಯಿಂದ ಟರ್ಮಿನಲ್ ಕುಸಿತ: ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ಸರ್ಕಾರದ ಕಳಪೆ ಕಾಮಗಾರಿಯಿಂದ ಟರ್ಮಿನಲ್ ಕುಸಿತ: ಮಲ್ಲಿಕಾರ್ಜುನ ಖರ್ಗೆ

ದೆಹಲಿ: ದೆಹಲಿಯಲ್ಲಿ ಸತತವಾಗಿ ಮಳೆ ಆಗುತ್ತಿರುವುದರಿಂದ ದೆಹಲಿಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತು‌ ಭಾರೀ ಅನಾಹುತವೇ ಸೃಷ್ಟಿಯಾಗಿದೆ. ಇನ್ನು ಮೇಲ್ಚಾವಣಿ ಕುಸಿತದಿಂದ ಪಾರ್ಕಿಂಗ್ ಮಾಡಿದ ವಾಹನಗಳು ಜಕಂ ಆಗಿವೆ.

ಹೌದು, ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲ್ಛಾವಣಿ ಕುಸಿತಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್ ಶುಕ್ರವಾರ ದೂಷಿಸಿದೆ. “ಭ್ರಷ್ಟ, ಅಸಮರ್ಥ ಮತ್ತು ಸ್ವಾರ್ಥಿ ಸರ್ಕಾರದ” ಕ್ರಮಗಳಿಂದಾಗಿ ಸಂತ್ರಸ್ತರು ಈ ಸ್ಥಿತಿ ಅನುಭವಿಸಬೇಕಾಯಿತು ಎಂದು ಹೇಳಿದ ಕಾಂಗ್ರೆಸ್   ಕೇಂದ್ರದ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದಿದೆ. ದೆಹಲಿಯಲ್ಲಿ ಭಾರೀ ಮಳೆಯ ನಡುವೆ ಟರ್ಮಿನಲ್ 1 ರ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಐವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಟನ ಮೇಲಿನ ಕ್ರೇಜ್‌ನಿಂದ ಖೈದಿ ನಂಬರ್ 6106 ಟ್ರೆಂಡಿಂಗ್‌..!

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ಬಳಿ ಕಟ್ಟಡವನ್ನು ಉದ್ಘಾಟಿಸಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಹೊಗಳಿದ್ದರು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.   ಆದರೆ, ಪ್ರಧಾನಿ ಮೋದಿ ಉದ್ಘಾಟಿಸಿದ ಕಟ್ಟಡ ಇದಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದಿದೆ ಎಂಬ ಮೋದಿಯವರ ಹೇಳಿಕೆಗಳಿಗೆ ಈ ಅಪಘಾತ ಕಪ್ಪು ಚುಕ್ಕಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಳೆದ 10 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಕಳಪೆ ಮೂಲಸೌಕರ್ಯಗಳು ಕಾರ್ಡ್‌ಗಳ ಗೋಪುರದಂತೆ ಕುಸಿಯಲು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯವೇ ಕಾರಣ ಎಂದು ಖರ್ಗೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

Related