ನಾನೇನಾದ್ರೂ ಕೊಲೆ ಮಾಡಿದ್ದೀನಾ? ತೆಲುಗು ನಟಿ ಹೇಮಾ ಕೂಗಾಟ..!

ನಾನೇನಾದ್ರೂ ಕೊಲೆ ಮಾಡಿದ್ದೀನಾ? ತೆಲುಗು ನಟಿ ಹೇಮಾ ಕೂಗಾಟ..!

ಬೆಂಗಳೂರು: ತೆಲುಗು ನಟಿ ಹೇಮಾ ಅವರು ರೇವ್ ಪಾರ್ಟಿ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ಅತಿಥಿಯಾಗಿದ್ದು, ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಿಮಾ ಆನೇಕಲ್ ನಲ್ಲಿರುವ ಜೆಎಂಎಪ್ ಸಿ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿದ್ದರು. ಇನ್ನು ವಿಚಾರಣೆಗೆ ಹಾರದರಾಗಿದ್ದ ಸಂದರ್ಭದಲ್ಲಿ ಮತ್ತೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಗುಡುಗಿದ್ದಾರೆ.

ಹೌದು, ತೆಲುಗು ನಟಿ ಹೇಮಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ನನ್ನನ್ನು ಹೀಗೆ ಟಿವಿಯಲ್ಲಿ ತೋರಿಸುತ್ತಿದ್ದೀರಾ? ನಾನೇನಾದರೂ ಕೊಲೆ ಮಾಡಿದ್ದೀನ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನಿಸಿದ್ದಾರೆ.

ಯೆಸ್…ಎಲೆಕ್ಟ್ರಾನಿಕ್ ಸಿಟಿ ರೇವ್​ ಪಾರ್ಟಿ ದಿನಕ್ಕೊಂದು ಕಲರ್ ಕಲರ್ ಟ್ವಿಸ್ಟ್ ಸಿಕ್ತಿದೆ. ಪೊಲೀಸರ ಅತಿಥಿಯಾಗಿ ಜೈಲೂಟ ತಿನ್ನುತ್ತಿರುವ ಹೇಮಾ, ಇಂದು ವಿಚಾರಣೆಗೆ ಆನೇಕಲ್ ನ ಜೆಎಂಎಪ್ ಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಇದೇ ವೇಳೆ ಪೋಲಿಸ್‌ ವಾಹನದಿಂದ ಇಳಿಯುತ್ತಿದ್ದಂತೆ ಮಾಧ್ಯಮದವರ ಮೇಲೆ ಫುಲ್ ಗರಂ ಆಗಿದ್ದಾರೆ. ಯಾಕೆ ನನ್ನನ್ನು ಹೀಗೆ ತೋರಿಸ್ತೀರಾ??. ನಾನು ಕೊಲೆ ಮಾಡಿದ್ದೀನಾ ಎಂದು ಕೂಗಾಟ ನಡೆಸಿದ್ರು.

ನಂತರ ವಿಚಾರಣೆಗೆ ಹಾಜರಾಗಿದ್ದ ವೇಳೆ ಹೇಮಾಳಿಗೆ ಬುರ್ಖಾ ತೆಗೆಸಿ ಆರತಿ ಎತ್ತಿದ ಪೊಲೀಸರು ಅತಿಥಿ ಸತ್ಕಾರ ಮಾಡಿದ್ರು. ಎರಡು ದಿನಗಳ ವಿಚಾರಣೆಗೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ ಸಿಸಿಬಿ ಪೊಲೀಸರು. ಇದನ್ನೂ ಓದಿ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯರನ್ನ ಭೇಟಿ ಮಾಡಿದ ಮಾಜಿ ಸಿಎಂ

ಇನ್ನು ನಟಿ ಹೇಮಾ ಪರ ಸುಪ್ರೀಂಕೋರ್ಟ್ ವಕೀಲರಾದ ಡಾ. ವರಪ್ರಸಾದ್ ರಾವ್ ರವರಿಂದ ವಾದ ಮಂಡಿಸಿದರು. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಸಂತೋಷ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಲಾಗಿದೆ. ನ್ಯಾಯಾಲಯ ಖಾಸಗಿ ಆಸ್ಪತ್ರೆ ವರದಿಗೆ ಮನ್ನಣೆ ನೀಡಬಾರದು. ಹಾಗಾಗಿ ಸಿಸಿಬಿ ಕಸ್ಟಡಿಗೆ ನೀಡಬಾರದು ಎಂದು ಹೇಮಾ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಅದ್ರೆ ವಾದ ಪ್ರತಿವಾದಗಳನ್ನ ಅಲಿಸಿದ ನ್ಯಾಯಾಧೀಶರು ನಟಿ  ಹೇಮಾರನ್ನ ಒಂದು ದಿನದ ಮಟ್ಟಿಗೆ ಪೋಲಿಸ್‌ ಕಸ್ಟಡಿಗೆ ಕೊಟ್ಟಿದೆ.

Related