ಬೆಂಗಳೂರಿನ ಮೆಟ್ರೋದಲ್ಲಿ ಮತ್ತೆ ತಾಂತ್ರಿಕ ದೋಷ; ಪ್ರಯಾಣಿಕರ ಪರದಾಟ..!

ಬೆಂಗಳೂರಿನ ಮೆಟ್ರೋದಲ್ಲಿ ಮತ್ತೆ ತಾಂತ್ರಿಕ ದೋಷ; ಪ್ರಯಾಣಿಕರ ಪರದಾಟ..!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಇಂದು (ಜೂನ್ 13 ಗುರುವಾರ) ರಂದು ಬೆಳಿಗ್ಗೆ ನಮ್ಮ ಮೆಟ್ರೋದಲ್ಲಿ ತಾಂತ್ರಿಕ ದೋಷ ಕಂಡು ಇರುವುದರಿಂದ ಪ್ರಯಾಣಿಕರು ಪರದಾಡುವಂಥ ಪರಿಸ್ಥಿತಿ ಬಂದೊದಗಿತ್ತು.

ಹೌದು, ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪೀಕ್‌ ಅವಧಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಪ್ರಯಾಣಿಕರು ಒಂದು ತಾಸಿಗೂ ಹೆಚ್ಚು ಸಮಯ ರೈಲಿಗೆ ಕಾಯಬೇಕಾಯಿತು. ಕಚೇರಿಗೆ ಹೋಗುವ ಸಮಯದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಉದ್ಯೋಗಿಗಳು ನಿಲ್ದಾಣದಲ್ಲೇ ನಿಂತು ಪರದಾಡುವಂತಾಯಿತು. ಇದನ್ನೂ ಓದಿ: ಮಾಜಿ ಸಿಎಂನ ಪೊಲೀಸರು ಇಂದೇ ಬಂಧಿಸ್ತಾರ..?

ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಮೆಟ್ರೋ ರೈಲು ಕೆಟ್ಟು ನಿಂತ ಹಿನ್ನೆಲೆಯಲ್ಲಿ ನೂರಾರು ಪ್ರಯಾಣಿಕರು ತಮ್ಮಕೆಲಸ ಕಾರ್ಯಗಳಿಗೆ ತೆರಳಲು ವಿಳಂಬವಾಯಿತು. ಬೆಳಗ್ಗೆ 9. 58ಕ್ಕೆ ಮೆಟ್ರೋ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು, ಆದರೆ ಬಿಎಂಆರ್ ಸಿಎಲ್ 11.30 ಕ್ಕೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಪದೇ ಪದೇ ರೈಲು ಕೆಟ್ಟು ನಿಂತು ವಿಳಂಬವಾಗುತ್ತಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related