ಇಂಗ್ಲೆಂಡ್​ ಬೇಟೆಗೆ ಟೀಂ ಇಂಡಿಯಾ​ ರೆಡಿ ; ಇದು ಸೇಡಿನ ಹಾಗೂ ಪ್ರತಿಷ್ಠೆಯ ಪಂದ್ಯ

ಇಂಗ್ಲೆಂಡ್​ ಬೇಟೆಗೆ ಟೀಂ ಇಂಡಿಯಾ​ ರೆಡಿ ; ಇದು ಸೇಡಿನ ಹಾಗೂ ಪ್ರತಿಷ್ಠೆಯ ಪಂದ್ಯ

ಟಿ20 ವಿಶ್ವಕಪ್​ ಟೂರ್ನಿಯ ಮತ್ತೊಂದು ಹೈವೋಲ್ಟೆಜ್​ ಕದನಕ್ಕೆ ಸಜ್ಜಾಗಿದೆ. ಇಂಗ್ಲೆಂಡ್‌ ವಿರುದ್ಧ ಸೇಡಿನ ಸಮರಕ್ಕೆ  ಟೀಂ ಇಂಡಿಯಾ ತಂಡಕ್ಕೆ ನಿರ್ಣಾಯಕ ದಿನವಾಗಿದೆ.. ಗಯಾನಾದ ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಕ್ರಿಕೆಟ್​ ಲೋಕದ ದಿಗ್ಗಜರುಗಳು ಮುಖಾಮುಖಿಯಾಗಲಿದೆ. ಬಲಾಢ್ಯ ಇಂಗ್ಲೆಂಡ್​​ ನಡುವಿನ ಕಾಳಗದ ಮೇಲೆ ವಿಶ್ವ ಕ್ರಿಕೆಟ್​ ಲೋಕದ ಕಣ್ಣಿದೆ. ಸೆಮಿಸ್​ ಸಮರದಲ್ಲಿ ಯಾರು? ಯಾರನ್ನ ಸೋಲಿಸಿ ಫೈನಲ್​ಗೆ ಎಂಟ್ರಿ ಕೊಡ್ತಾರೆ? ಎಂಬ ಕುತೂಹಲ ಕ್ರಿಕೆಟ್ ಲೋಕದ ಫೀವರ್​ ಹೆಚ್ಚಿಸಿದೆ.ಇದೀಗ ಗಯಾನದಲ್ಲಿ ಗೆದ್ದು ಆಂಗ್ಲರಿಗೆ ಗೇಟ್​ಪಾಸ್​ ನೀಡಲು ಟೀಮ್​ ಇಂಡಿಯಾ ಸಜ್ಜಾಗಿದೆ.

2022ರ T20 ವಿಶ್ವಕಪ್​ನ ಸೆಮಿಸ್​ನಲ್ಲಿ ಹಿಗ್ಗಾಮುಗ್ಗಾ ಬಾರಿಸಿದ್ದ ಆಂಗ್ಲಪಡೆ, ಟೀಮ್​ ಇಂಡಿಯಾವನ್ನ ನಾಕ್​ಔಟ್​​ ಮಾಡಿತ್ತು. ಇದೀಗ ಪೇ ಬ್ಯಾಕ್​​ ಟೈಮ್​ ಬಂದಾಗಿದೆ. ಇಂಡಿಯನ್​ ಟೈಗರ್ಸ್​​, ಅಂಗ್ಲರನ್ನ ಬೇಟೆಯಾಡಲು ತುದಿಗಾಲಲ್ಲಿ ನಿಂತಿದ್ದಾರೆ.ಇನ್ನು ಭಾರತ ತಂಡವು ವಿಶ್ವಕಪ್​​ನಲ್ಲಿ ಅಜೇಯ ತಂಡವಾಗಿ ಮುನ್ನುಗ್ಗುತ್ತಿರೋದ್ರಿಂದ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ.

ಗಯಾನದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಫೈನಲ್ ಪ್ರವೇಶ ಮಾಡಿದ ತಂಡವು ಜೂನ್ 29 ರಂದು ವಿಶ್ವಕಪ್​​ಗಾಗಿ ಅಂತಿಮ ಹೋರಾಟ ಮಾಡಲಿದೆ. 2022ರಲ್ಲಿ ನಡೆದ ಟಿ20 ವಿಶ್ವಕಪ್​​ನಲ್ಲೂ ಭಾರತ ಇಂಗ್ಲೆಂಡ್ ವಿರುದ್ಧ ಆಡಿ ಸೋತಿತ್ತು. ನವೆಂಬರ್ 10, 2022ರಂದು ನಡೆದ ಸೆಮಿ ಫೈನಲ್​​ನಲ್ಲಿ ಇಂಗ್ಲೆಂಡ್ 10 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಹೀಗಾಗಿ ಭಾರತ ತಂಡಕ್ಕೆ ಇದು ಸೇಡಿನ ಹಾಗೂ ಪ್ರತಿಷ್ಠೆಯ ಪಂದ್ಯವಾಗಿದೆ. ಇದನ್ನೂ ಓದಿ: ಟಿ20; ಇಂದು ಇಂಡಿಯಾ-ಇಂಗ್ಲೆಂಡ್ ಮುಖಾಮುಖಿ

ಇಂಡೋ-ಇಂಗ್ಲೆಂಡ್​​ ನಡೆಯೋ ಗಯಾನದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ನಿನ್ನೆ ಹವಮಾನ ಇಲಾಖೆ ಯೆಲ್ಲೋ ಅಲರ್ಟ್‌ನ್ನು ಘೋಷಣೆ  ಮಾಡಿದೆ. ಇಂದು  ಕೂಡ  ವರುನ ಅಬ್ಬರಿಸೋ ಸಾಧ್ಯತೆಯಿದ್ದು ಪಂದ್ಯಕ್ಕೆ  ರದ್ದಾದ್ರೆ, ಟೀಂ ಇಂಡಿಯಾ ಫೈನಲ್‌ಗೆ ಎಂಟ್ರಿ ಕೊಡಲಿದೆ.. ಮಳೆ ಭೀತಿ ನಡುವೆಯೋ ಇಂದಿನ ಪಂದ್ಯ ನಡೆಯಲಿ ಅನ್ನೋದು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಆಸೆಯಾಗಿದೆ. ಸೇಡಿನ ಸಮರದಲ್ಲಿ ಹಳೆ ಸೇಡನ್ನ ತೀರಿಸಿಕೊಂಡು, ಫೈನಲ್​ಗೆ ರಾಜನಂತೆ ಎಂಟ್ರಿ ಕೊಡಲಿ ಅನ್ನೋದು ನಮ್ಮ ಆಶಯವೂ ಕೂಡ.

Related