ಟೀಮ್ ಇಂಡಿಯಾಗೆ 47 ರನ್​ಗಳ ಭರ್ಜರಿ ಜಯ

ಟೀಮ್ ಇಂಡಿಯಾಗೆ 47 ರನ್​ಗಳ ಭರ್ಜರಿ ಜಯ

ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಗ್ರೂಪ್​​​ ಸ್ಟೇಜ್​​ನಲ್ಲಿ ಹ್ಯಾಟ್ರಿಕ್​ ಜಯ ಸಾಧಿಸಿದ್ದ ತಂಡ, ಸೂಪರ್​ 8 ಹಂತದಲ್ಲಿ ಮೊದಲನೇ ಪಂದ್ಯದಲ್ಲಿಯೇ ಗೆಲುವಿನ ಶುಭಾರಂಭ ಮಾಡಿದೆ. ಅಫ್ಘಾನಿಸ್ತಾನ​ ಎದುರು ಬಾರ್ಬಡೋಸ್​ನಲ್ಲಿ ಟೀಮ್​ ಇಂಡಿಯಾಗೆ ಭರ್ಜರಿ ಜಯ ಸಿಕ್ಕಿದೆ.

ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಜಯದ ಯಾತ್ರೆ ಮುಂದುವರೆದಿದೆ. ಸೂರ್ಯಕುಮಾರ್​ ಅಬ್ಬರದ ಬ್ಯಾಟಿಂಗ್‌ ಮತ್ತು ಯಾರ್ಕರ್‌ ಕಿಂಗ್‌ ಬುಮ್ರಾ ದಾಳಿಗೆ ಅಫ್ಘಾನಿಸ್ತಾನ ಪಡೆ ತತ್ತರಿಸಿಹೋಯ್ತು. ಬಾರ್ಬಡೋಸ್​​ನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದಲ್ಲಿ 47 ರನ್​ಗಳಿಂದ ಗೆದ್ದು ಸೂಪರ್​ 8 ಹಂತದಲ್ಲಿ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ರು. ಒತ್ತಡಕ್ಕೆ ಒಳಗಾಗಿ ಬಿಗ್​ಶಾಟ್​ ಹೊಡೆಯೋ ಭರದಲ್ಲಿ ರೋಹಿತ್ ಶರ್ಮಾ ವಿಕೆಟ್​ ಕೈಚೆಲ್ಲಿದ್ರು. ಬಳಿಕ ಕ್ರಿಸ್​ನಲ್ಲಿ ಜೊತೆಯಾದ ವಿರಾಟ್​ ಕೊಹ್ಲಿ- ರಿಷಭ್​ ಪಂತ್​ ತಂಡಕ್ಕೆ ಚೇತರಿಕೆ ನೀಡೋ ಪ್ರಯತ್ನ ಮಾಡಿದ್ರು. ಆದ್ರೆ, ಅಫ್ಘನ್​ ನಾಯಕ ರಶೀದ್​ ಖಾನ್​ ಇದಕ್ಕೆ ಅವಕಾಶ ನೀಡಲಿಲ್ಲ. ಕೊಹ್ಲಿ, ಪಂತ್​ ಇಬ್ಬರೂ ರಶೀದ್​ ಸ್ಪಿನ್​ ಬಲೆಗೆ ಬಿದ್ರು. ಬಳಿಕ ಕಣಕ್ಕಿಳಿದ ಶಿವಂ ದುಬೆಯದ್ದು ಅದೇ ರಾಗ ಅದೇ ಹಾಡು. 10 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ಇದನ್ನೂ ಓದಿ: ಕೆಎಂಜೆಯು ವತಿಯಿಂದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗಳು

ಇನ್ನು 5ನೇ ವಿಕೆಟ್​ಗೆ ಜೊತೆಯಾದ ಹಾರ್ದಿಕ್​ ಪಾಂಡ್ಯ-ಸೂರ್ಯಕುಮಾರ್​ ಯಾದವ್​ ಸೂಪರ್​ ಜೊತೆಯಾಟವಾಡಿದ್ರು. 90 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ ಟೀಂ ಇಂಡಿಯಾಗೆ ಹಾರ್ದಿಕ್​ ಪಾಂಡ್ಯ-ಸೂರ್ಯಕುಮಾರ್​ ಆಸರೆಯಾದರು. 60 ರನ್​ಗಳ ಜೊತೆಯಾಟ ಆಡಿ ತಂಡಕ್ಕೆ ಬಲತಂದರು. ಇದರಿಂದ ಟೀಮ್​ ಇಂಡಿಯಾ, 20 ಓವರ್‌ಗಳಲ್ಲಿ 181 ರನ್​ಗಳ ಬಿಗ್​ ಸ್ಕೋರ್​ ಕಲೆಹಾಕಿತು.

182 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಅಫ್ಘನ್​ ತಂಡಕ್ಕೆ ಬಾದ್​ ಷಾ ಬೂಮ್ರಾ ಶಾಕ್​ ನೀಡಿದ್ರು. ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್​, ಹಝರತ್ತುಲ್ಲಾ ಝಝೈಗೆ ಗೇಟ್​ಪಾಸ್​ ನೀಡಿದ್ರು. ಇದ್ರ ಬೆನ್ನಲ್ಲೇ ಅಕ್ಷರ್​ ಪಟೇಲ್​ ಸ್ಪಿನ್​ ಮೋಡಿಗೆ ಇಬ್ರಾಹಿಂ ಝರ್ದಾನ್​ ಪೆವಿಲಿಯನ್​ ಸೇರಿದ್ರು. 23 ರನ್​ಗಳಿಸುವಷ್ಟರಲ್ಲೇ ಅಫ್ಘನ್​ ತಂಡ 3 ವಿಕೆಟ್​ ಕಳೆದುಕೊಳ್ತು.ಆರಂಭಿಕ ಆಘಾತ ಕಂಡ ತಂಡಕ್ಕೆ ಗುಲ್ಬದ್ದೀನ್​ ನೈಬ್​, ಅಝಮತ್ತುಲ್ಲಾ ಒಮರ್​ಝೈ ಕೆಲ ಕಾಲ ನೆರವಾದ್ರು. ಹೆಚ್ಚು ಹೊತ್ತು ಕ್ರಿಸ್​ನಲ್ಲಿರಲು ಭಾರತದ ಸ್ಪಿನ್​ ಟ್ವಿನ್ಸ್​ ​ಬಿಡಲಿಲ್ಲ. ಗುಲ್ಭದ್ದೀನ್ ಆಟಕ್ಕೆ ಕುಲ್​ದೀಪ್​, ಒಮರ್​ಝೈ ಓಟಕ್ಕೆ ಜಡೇಜಾ ಬ್ರೇಕ್​ ಹಾಕಿದ್ರು. ನಂತರ ಕಣಕ್ಕಿಳಿದ ನಜೀಬುಲ್ಲಾ ಝರ್ದಾನ್​​ ಬೂಮ್ರಾ ಬಿರುಗಾಳಿ ತತ್ತರಿಸಿ ಹೋದ್ರು. ಮೊಹಮ್ಮದ್​ ನಬಿ 14 ರನ್​ಗಳಿಸಿ ಆಟ ಅಂತ್ಯಗೊಳಿಸಿದ್ರು.

 

Related