ಟಿ20; ಫೈನಲ್ ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

ಟಿ20; ಫೈನಲ್ ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

ಗಯಾನ: ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ನಿಂದ ಇದೀಗ ಫೈನಲ್ ಗೆ ಲಗ್ಗೆ ಇಟ್ಟಿದೆ ಇದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೊ ಹಬ್ಬ.

ಹೌದು, ನಿನ್ನೆ ಗಯಾನಾದ ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಟಿ20 ​ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಸೆಮಿಫೈನಲ್ ಸೆಣೆದಾಟ ನಡೆದಿದ್ದು, ಇದರಲ್ಲಿ ಭಾರತ ತಂಡ 171 ರನ್ ಗಳಿಸಿ ಭರ್ಜರಿ ಜಯಸಾದಿಸಿದೆ.

ಭಾರತ ನೀಡಿದ 172ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 16.4 ಓವರ್ ನಲ್ಲಿ 103 ರನ್ ಗೆ ಆಲೌಟ್ ಆಯಿತು. ಆ ಮೂಲಕ ಭಾರತದ ಎದುರು 68ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಇದನ್ನೂ ಓದಿ: ಇಂಗ್ಲೆಂಡ್​ ಬೇಟೆಗೆ ಟೀಂ ಇಂಡಿಯಾ​ ರೆಡಿ ; ಇದು ಸೇಡಿನ ಹಾಗೂ ಪ್ರತಿಷ್ಠೆಯ ಪಂದ್ಯ

ಈ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕುಲದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್ ಜೋಡಿ ಇಂಗ್ಲೆಂಡ್ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿತು. ಈ ಜೋಡಿ ತಲಾ 3 ವಿಕೆಟ್ ಪಡೆದು ಭಾರತ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಅಕ್ಸರ್ 4 ಓವರ್ ಎಸೆದು 23 ರನ್ ನೀಡಿ ಮೂರು ವಿಕೆಟ್ ಪಡೆದರೆ, ಕುಲದೀಪ್ 4 ಓವರ್ ಎಸೆದು ಕೇವಲ 19ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

 

Related