ಇನ್ನೂ ನಿಲ್ಲದ ವರದಕ್ಷಣೆ ಕಿರುಕುಳ

 ಇನ್ನೂ ನಿಲ್ಲದ ವರದಕ್ಷಣೆ ಕಿರುಕುಳ

ಲಕ್ನೋ, ಫೆ. 10 : ಸಮಾಜದ ಪಿಡುಗುಗಳಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿರುವ ವರದಕ್ಷಿಣೆ ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಕಳೆದರೂ ಇನ್ನು ನಿಂತಿಲ್ಲ ಎಂದರೆ ತಿಳಿಯುತ್ತದೆ ಸಮಾಜದಲ್ಲಿ ಇದರ ಪ್ರಭಾವ ಎಷ್ಟಿದೆ ಎಂದು. ಒಂದು ರೀತಿಯಲ್ಲಿ ಇದು ಸಮಾಜದಲ್ಲಿ ಜನರ ಮನಸ್ಥಿತಿಯಲ್ಲಿ ಫಿಕ್ಸ್ ಆದಂತಿದೆ.ಪತ್ನಿಯ ಮೇಲೆ ಸೀಮೆ ಎಣ್ಣೆ  ಸುರಿದು ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗಂಭೀರ ಗಾಯ ಗೊಂಡ ಸೀಮಾ. ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಪತಿ ಮೊಹಮ್ಮದ್ ಆರೀಫ್, ಕುಟುಂಬಸ್ಥರು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸೀಮಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2 ವರ್ಷಗಳ ಹಿಂದೆ ಮೊಹಮ್ಮದ್ ಆರೀಫ್ ಜೊತೆ ಸೀಮಾಳ ಮದುವೆಯಾಗಿತ್ತು. ಮದುವೆಯಾದ ನಂತರ ಆರೀಫ್ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಸೀಮಾಳಿಗೆ ಕಿರುಕುಳ ನೀಡುತ್ತಿದ್ದರು.

 

Related