ಯುವ ಮತ್ತು ಯುವ ಪರ ವಕೀಲರಿಗೆ ತಿರುಗೇಟು ನೀಡಿದ ಶ್ರೀದೇವಿ

ಯುವ ಮತ್ತು ಯುವ ಪರ ವಕೀಲರಿಗೆ ತಿರುಗೇಟು ನೀಡಿದ ಶ್ರೀದೇವಿ

ಬೆಂಗಳೂರು: ಡಾ. ರಾಜಕುಮಾರ್ ಅವರ ಕುಟುಂಬದ ಕುಡಿ ಇದೀಗ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಘವೇಂದ್ರ ರಾಜಕುಮಾರ ಅವರ ಮಗ ಯುವರಾಜ್ ಕುಮಾರ್ ಅವರು ಪತ್ನಿ ಶ್ರೀದೇವಿ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹೌದು, ಪತ್ನಿ ಶ್ರೀದೇವಿಯವರಿಗೆ ಅನೈತಿಕ ಸಂಬಂಧ ಮತ್ತು ರಾಜಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಯುವರಾಜ್ ಕುಮಾರ್ ಅವರು ಪತ್ನಿ ಶ್ರೀದೇವಿಯವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇನ್ನು ಯುವ ಪತ್ನಿ ಶ್ರೀದೇವಿ ಈ ಎಲ್ಲ ಆರೋಪಗಳಿಗೆ ತಿರು ಗೇಟು ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್​ ರೇವಣ್ಣಗೆ 14 ದಿನ ಜೈಲೇ ಗತಿ

ವಿಚ್ಛೇದನ ಕುರಿತು ಈಗಾಗಲೇ ಯುವರಾಜ್ ಕುಮಾರ್ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿರುತ್ತಾರೆ. ಇನ್ನು ಯುವರಾಜ್ ಕುಮಾರ್ ಅವರ ಪರ ವಕೀಲ ಸೋಮವಾರ (ಜೂನ್ 10)  ಸುದ್ದಿಗೋಷ್ಠಿ ಮಾಡಿ ಶ್ರೀದೇವಿ ವಿರುದ್ಧ ಇಲ್ಲದ ಸಲದ ಆರೋಪಗಳನ್ನು ಮಾಡಿದ್ದಾರೆ. ಇದೀಗ ಶ್ರೀದೇವಿಯವರು ಯುವ ಮತ್ತು ಯುವ ಪರ ವಕೀಲರಿಗೆ ತಿರುಗೇಟು ನೀಡಿದ್ದಾರೆ.

ರಾಜ್​ಕುಮಾರ್ ಅಕಾಡೆಮಿಯಿಂದ ಪರ್ಸನಲ್ ಅಕೌಂಟ್​ಗೆ 3 ಕೋಟಿ ರೂಪಾಯಿ ಟ್ರಾನ್ಸಫರ್ ಮಾಡಿಕೊಂಡಿದ್ದಾರೆ. ನಿನ್ನನ್ನು ಬೀದಿಗೆ ತರುತ್ತೇನೆ ಎಂದು ಪತಿಗೆ ಬೆದರಿಸಿದ್ದಾರೆ. ಯುವನ ಬಳಿಕ ಅಮೆರಿಕಕ್ಕೆ ಬರುವಂತೆ ಒತ್ತಾಯ ಮಾಡಿದ್ದರು. ಬಾಯ್​ಫ್ರೆಂಡ್ ಮೂಲಕ ಮಗು ಪಡೆಯೋ ಆಲೋಚನೆಯಲ್ಲಿ ಅವರಿದ್ದರು. ರಾಧಯ್ಯ ಅನ್ನೋದು ಶ್ರೀದೇವಿ ಬಾಯ್​ಫ್ರೆಂಡ್ ಹೆಸರು’ ಎಂದು ಆರೋಪಿಸಿದ್ದರು.

ಇದಕ್ಕೆ ಶ್ರೀದೇವಿ ಉತ್ತರಿಸಿದ್ದಾರೆ. ‘ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಂದು ಹೆಣ್ಣಿನ ಚಾರಿತ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ’ ಎಂದು ಫೇಸ್​ಬುಕ್ ಪೋಸ್ಟ್ ಆರಂಭಿಸಿದ್ದಾರೆ.

‘ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ ಹಾಗೂ ಮಾನವೀಯತೆಗಳನ್ನು ಗೌರವಿಸದೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ’ ಎಂದಿದ್ದಾರೆ.

Related