ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್..!

ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್..!

ಹಾಸನ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವ್ಯಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅತಿಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಕೃತ್ಯಗಳು ತಿಂಗಳು ಕಾಲದಷ್ಟು ಮತ್ತಷ್ಟು ಪ್ರಕರಣಗಳು ಬಯಲಾಗುತ್ತಿವೆ.

ಇನ್ನು ಪ್ರಜ್ವಲ್ ರೇವಣ್ಣ ಅವರ ಕುರಿತಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಎಂದು ಹೊರ ಬಿದ್ದಿದೆ.

ಹೌದು, ಪ್ರಜ್ವಲ್ ರೇವಣ್ಣ ಅವರು ಬಳಸುತ್ತಿದ್ದ ಸಿಮ್ ಗಳು ಒಂದೆರಡು ಅಲ್ಲ. ಸುಮಾರು 15 ಸಿಮ್‍ಗಳನ್ನು ಪ್ರಜ್ವಲ್ ರೇವಣ್ಣ ಅವರು ಬಳಸುತ್ತಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ಪ್ರಜ್ವಲ್ ರೇವಣ್ಣ ಅವರ ಮನೆಗೆ ವಿದ್ಯಾಭ್ಯಾಸಕ್ಕೆ ಸೀಟ್ ಕೇಳಿಕೊಂಡು ಬಂದ ಮಹಿಳೆಯರು ಮತ್ತು ಕೆಲಸ ಕೇಳಿಕೊಂಡು ಬಂದ ಮಹಿಳೆಯರೇ ಟಾರ್ಗೆಟ್ ಮಾಡುತ್ತಿದ್ದರಂತೆ. ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಈಗ ಕೆಎಂಹೆಚ್‌ ಕಪ್‌ಗೆ ರಾಯಭಾರಿ

ಸಹಾಯ ಕೇಳಿಕೊಂಡು ಮನೆಗೆ ಬಂದ ಮಹಿಳೆಯರನ್ನು ಹುಸ್ಲಾಯಿಸಿ ಅವರ ಫೋನ್ ನಂಬರ್ ತೆಗೆದುಕೊಂಡು ಪದೇಪದೇ ಕರೆ ಮಾಡಿ ನನ್ನ ಜೊತೆ ಸಹಕರಿಸಬೇಕೆಂದು ವಿಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಪದೇಪದೇ ಕರೆ ಮಾಡುತ್ತಿದ್ದರು ಎಂದು ಇತ್ತೀಚೆಗೆ ಸಂತ್ರಸ್ತೆಯೊಬ್ಬರು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ.

ಇದು ಮಾತ್ರವಲ್ಲದೆ ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟ್ ಕೇಳಿಕೊಂಡು ಬಂದವರ ಮೇಲೂ ಕಣ್ಣು ಹಾಕಿದ್ದ. ಅವರ ಬಳಿ ಫೋನ್ ನಂಬರ್ ಪಡೆದು ಪದೇ ಪದೇ ಕಾಲ್ ಮಾಡುತ್ತಿದ್ದ. ಕ್ರಮೇಣ ಅವರೊಂದಿಗೆ ಸಲುಗೆ ಬೆಳೆಸಿ ಕರೆ ಮಾಡುತ್ತಿದ್ದ. ನಂತರ ವೀಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಬೆದರಿಕೆ ಹಾಕುತ್ತಿದ್ದ.

ಇಷ್ಟು ಮಾತ್ರವಲ್ಲದೇ ನನ್ನೊಂದಿಗೆ ಸಹಕರಿಸದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಬೆದರಿಕೆಗೆ ಹೆದರಿ ನಗ್ನರಾಗಿರುವುದಾಗಿ ಇತ್ತೀಚಿಗೆ ಸಂತ್ರಸ್ತೆಯೊಬ್ಬರು ಕೊಟ್ಟ ದೂರಿನಲ್ಲಿ ಪ್ರಜ್ವಲ್ ಕರಾಳಮುಖ ಬಯಲು ಮಾಡಿದ್ದಾರೆ.

Related