ಕುರಿಗಳ ಜೀವಕ್ಕೆ ಕುತ್ತು

 ಕುರಿಗಳ ಜೀವಕ್ಕೆ ಕುತ್ತು

ಗುಬ್ಬಿ , ಫೆ.10 :  ರಸ್ತೆಯಲ್ಲಿ ಬಿಸಾಡಿದ್ದ ಅವಧಿ ಮೀರಿದ ಪದಾರ್ಥಗಳನ್ನು ಸೇವಿಸಿದ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಕಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಕುರಿಗಳು ಮೇಯಿಸಲು ಹೋದ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಖಾಸಗಿ ಕಂಪನಿಗೆ ಸೇರಿದ ಅವಧಿ ಮುಗಿದ ತಿಂಡಿ ಪದಾರ್ಥಗಳನ್ನು ಸೇವಿಸಿದ್ದವು.

ಸಂಜೆ ರೈತರು ಮನೆಗೆ ವಾಪಸಾದ ನಂತರ ಕೊಟ್ಟಿಗೆಯಲ್ಲಿದ್ದ ಕುರಿಗಳು ತೀವ್ರ ಅಸ್ವಸ್ಥಗೊಂಡವು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯರು ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೆ 20 ಕುರಿಗಳು ಮೃತಪಟ್ಟಿವೆ.

Related