ಕಾನೂನು ಸಮರ ಸಾರಲು ಸಜ್ಜಾದ ರೇವಣ್ಣ

ಕಾನೂನು ಸಮರ ಸಾರಲು ಸಜ್ಜಾದ ರೇವಣ್ಣ

ಬೆಂಗಳೂರು: ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಬಂಧನಕೊಳಪಡಿಸಲಾಗಿತ್ತು.

ಇನ್ನು ಬಂಧನಗಳ ಪಟ್ಟಿದ್ದ ಎಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು ನಿನ್ನೆ ಮಂಗಳವಾರ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಬಂದಿದ್ದು, ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ ಎಂದು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನೂ ತಪ್ಪು ಮಾಡಿಲ್ಲ ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ ಅಂತಾ ಹೇಳಿದ್ದಾರೆ. ಷಡ್ಯಂತ್ರದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ಬೆಂಗಳೂರಿನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಂಜೆ ಚಾಮುಂಡಿ ಬೆಟ್ಟಕ್ಕೂ ಹೋಗಿ ದರ್ಶನ ಪಡೆದಿದರು. ಹೀಗೆ ದೇವರ ಮೊರೆಹೋಗಿರೋ ರೇವಣ್ಣ, ಜೊತೆ ಜೊತೆಗೆ ಕಾನೂನು ಹೋರಾಟವನ್ನೂ ಮುಂದುವರೆಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ರೇವಣ್ಣ ಇಂದು ಹಾಸನಕ್ಕೆ ಹೋಗುವ ಯೋಜನೆ ಇತ್ತು. ಹಾಸನದಲ್ಲೂ ಅದ್ಧೂರಿ ಸ್ವಾಗತಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ, ನಾನೆಲ್ಲೂ ಹೋಗಲ್ಲ ಎಂದಿರುವ ರೇವಣ್ಣ, ಬೆಂಗಳೂರಲ್ಲೇ ಇದ್ದು ಕಾನೂನು ಸಮರ ಸಾರಿದ್ದಾರೆ. ವಕೀಲರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ದೇವೇಗೌಡರ ಸಲಹೆ ಪಡೆದು ಹೆಜ್ಜೆ ಇಟ್ಟಿದ್ದಾರೆ.

ವಕೀಲರ ಭೇಟಿಗೂ ಮುನ್ನ ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ರೇವಣ್ಣ ಎರಡು ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

Related