ಬಿಸಿಲಿನಾಡಿನಲ್ಲಿ ಇತಿಹಾಸ ಸೃಷ್ಟಿಸಿದ ನಿವೃತ್ತ ಐಎಎಸ್ ಅಧಿಕಾರಿ

ಬಿಸಿಲಿನಾಡಿನಲ್ಲಿ ಇತಿಹಾಸ ಸೃಷ್ಟಿಸಿದ ನಿವೃತ್ತ ಐಎಎಸ್ ಅಧಿಕಾರಿ

ರಾಯಚೂರು: ಜಿಲ್ಲೆಯ ಲೋಕ ಕದನದಲ್ಲಿ ಭಾರಿ ಜಿದ್ದ ಜಿದ್ದಿನ ಪೈಪೋಟಿಯಲ್ಲಿ ಕೊನೆಗೂ ನಿವೃತ್ತ ಐಎಎಸ್ ಅಧಿಕಾರಿಯಾದ ಜಿ. ಕುಮಾರ ನಾಯಕ ಅವರು ವಿಜಯ ಪತಾಕೆ ಹಾರಿಸಿದ್ದಾರೆ. ಇನ್ನೇನು ಅಧಿಕೃತವಾದ ಘೋಷಣೆಯೊಂದೇ ಬಾಕಿ ಇದೆ. ಈ ಮೂಲಕ ಹೊರಗಿನಿಂದ ಬಂದು ಕಲ್ಪತರು ನಾಡನ್ನು ಗೆದ್ದು ಜಿ. ಕುಮಾರ ನಾಯಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಭಾರಿ ಕಾಂಗ್ರೇಸ್ ಪಕ್ಷದ ವರಿಷ್ಟರು ನಿವೃತ್ತ ಜಿಲ್ಲಾಧಿಕಾರಿಯಾದ ಜಿ. ಕುಮಾರ ನಾಯಕ ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿದ್ದರು. ಇತ್ತ ಇವರ ಎದುರಾಳಿಯಾಗಿ ಬಿಜೆಪಿ ಪಕ್ಷದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಕಣಕ್ಕಿಳಿದಿದ್ದರು. ಮತ ಎಣಿಕೆ ಆರಂಭದಿಂದ ಮುನ್ನಡೆ ಕಾಯ್ದುಕೊಂಡು ಬಂದ ಜಿ. ಕುಮಾರ ನಾಯಕ ಅವರು ಕೊನೆಗೂ ಜಯಭೇರಿ ಬಾರಿಸಿದ್ದಾರೆ.  ಬಹು ಮತಗಳ ಪಡೆಯುವ ಮೂಲಕ ಜಿ.ಕುಮಾರ ನಾಯಕ ಅವರು ಜಯ ಭೇರಿ ಬಾರಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಪಿ.ಸಿ.ಗದ್ದಿಗೌಡರ್ ಗೆಲುವು

ಇನ್ನು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಜಿ. ಕುಮಾರ ನಾಯಕ ಸತತ 18 ಸುತ್ತಿನಲ್ಲೂ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವಿನ ನಗೆ ಬೀರಿದ್ದಾರೆ.

ಇವರು ಮುಂಚೆ ಜಿಲ್ಲಾಧಿಕಾರಿಯಾಗಿ ರಾಯಚೂರು ಜಿಲ್ಲೆಗೆ ಬಹಳಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಇದಕ್ಕೆ ವರಿಷ್ಠರು ಜಿ. ಕುಮಾರ ನಾಯಕ  ಅವರಿಗೆ ಟಿಕೆಟ್ ನೀಡಿದಕ್ಕೆ ಸ್ಥಳೀಯರು  ವಿರೋಧ ವ್ಯಕ್ತಪಡಿಸಿದ್ದರು. ಆದರೂ ಛಲ ಬೀಡದೇ ಸ್ಪರ್ಧೆ ಮಾಡಿದ ಅವರು ಸದ್ಯ ಮತ ಎಣಿಕೆಯಲ್ಲಿ ಗೆಲುವು ಪಡೆದಿದ್ದಾರೆ.

ಆದರೆ ರಾಯಚೂರು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಎಂದೇ ಹೇಳಲಾಗಿದ್ದ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಭಾರಿ ಹಿನ್ನಡೆ ಅನುಭವಿಸುವ ಮೂಲಕ ಸೋತಿದ್ದಾರೆ.

ಇನ್ನು ಜಿ. ಕುಮಾರ ನಾಯಕ ಅವರು ಹೊರಗಿನಿಂದ ಬಂದು ಬಿಸಿಲುನಾಡಿನಲ್ಲಿ ಗೆದ್ದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಹೀಗಾಗಿ ರಾಯಚೂರು ಕೇತ್ರಕ್ಕೆ ಜಿ. ಕುಮಾರ ನಾಯಕ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದಂತೆ ಆಗಿದೆ. ಹೊರಗಿನವರು ಎನ್ನುವ ಕೂಗಿನ ಮಧ್ಯೆ ಲೋಕಸಭಾ ಎಲೆಕ್ಷನ್ನಲ್ಲಿ ಭರ್ಜರಿಯಾಗಿ ಜಿ. ಕುಮಾರ ನಾಯಕ ದೊಡ್ಡ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

(ವರದಿ: ನರಸಪ್ಪ ನಾಯಕ ಸಿಂಧನೂರು)

Related