ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಪವಿತ್ರಾಗೌಡ ಪೊಲೀಸರ ವಶಕ್ಕೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಪವಿತ್ರಾಗೌಡ ಪೊಲೀಸರ ವಶಕ್ಕೆ

ಬೆಂಗಳೂರು: ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ರೇಣುಕಾ ಸ್ವಾಮಿ ಎಂಬವರನ್ನು ಸುಮಾರು 10 ಜನರ ಜೊತೆ ಸೇರಿಕೊಂಡು ಕೊಲೆ ಮಾಡಿರುವ ಪ್ರಕರಣಕ್ಕೆ ಈಗಾಗಲೇ ನಟ ದರ್ಶನ್ ಅವರು ಪೋಲಿಸ್ ವಶದಲ್ಲಿದ್ದಾರೆ.

ಈ ಪ್ರಕರಣದಲ್ಲಿ ನಟಿ ಪವಿತ್ರ ಗೌಡ ಅವರ ಕೈವಾಡವಿದೆ ಎಂ ದು ಪೊಲೀಸರು ಇದೀಗ ನಟಿ ಪವಿತ್ರ ಗೌಡ ಅವರನ್ನು ಬಂಧಿಸಿದ್ದಾರೆ.

ಹೌದು, ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆ ನಡೆದಿದೆ. ಬೆಂಗಳೂರಿನಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್​​.ಆರ್​.ನಗರ ಠಾಣೆಯ ಪೊಲೀಸರು ಪವಿತ್ರಾಗೌಡಳನ್ನು ವಶಕ್ಕೆ ಪಡೆದಿದ್ದಾರೆ.

ಪವಿತ್ರಾಗೌಡಳನ್ನು ವಶಕ್ಕೆ ಪಡೆದ ಆರ್.ಆರ್. ನಗರ ಪೊಲೀಸ್ ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಅವರು ಕಾಮಾಕ್ಷಿ ಪಾಳ್ಯ‌ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಜೊತೆ ಅವರ ಅಕ್ಕ ಕೂಡ ಠಾಣೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಕೊಲೆ ಆರೋಪದಲ್ಲಿ ಪವಿತ್ರಾ ಗೌಡ ಹೆಸರು ..!

ಇನ್ನು ಅಚ್ಚರಿ ಎಂದರೆ ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂಬ ಮಾಹಿತಿ ಸಿಕ್ಕಿದೆ. ದರ್ಶನ್, ವಿಜಯಲಕ್ಷ್ಮೀ ಸಂಸಾರ ಬಗ್ಗೆ ಯೋಚನೆ ಮಾಡ್ತಿದ್ದ ಸ್ವಾಮಿ, ದಂಪತಿ ಸಂಸಾರದಲ್ಲಿ ಪವಿತ್ರಾಗೌಡ ಬರುತ್ತಿದ್ದಾಳೆಂದು ತಿಳಿದು ಮೆಸೇಜ್ ಮಾಡಿದ್ದ. ಪವಿತ್ರಾಗೌಡಗೆ ಮೆಸೇಜ್ ಮಾಡುತ್ತಿರುವುದನ್ನು ತಿಳಿದ ಬಳಿಕ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

Related