ನಿವೇದಿತಾ-ಚಂದನ್ ಶೆಟ್ಟಿ ವಿಚ್ಛೇದನಕ್ಕೆ ಕಾರಣ ಏನು ಗೊತ್ತಾ?

ನಿವೇದಿತಾ-ಚಂದನ್ ಶೆಟ್ಟಿ ವಿಚ್ಛೇದನಕ್ಕೆ ಕಾರಣ ಏನು ಗೊತ್ತಾ?

ಬೆಂಗಳೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಬ್ಬರೂ ಒಪ್ಪಿಕೊಂಡು ನಾಲ್ಕು ವರ್ಷದ ದಾಂಪತ್ಯಕ್ಕೆ ಅಂತ್ಯ ಹೇಳಲು ಮುಂದಾಗಿದ್ದಾರೆ.

ಹೌದು, ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ, ಇಬ್ಬರು ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಇವರಿಬ್ಬರೂ ವಿಚ್ಛೇದನ ಪಡೆಯಲು ಕಾರಣಗಳೇನು ಎಂಬ ಪ್ರಶ್ನೆ ಈಗಾಗಲೇ ಎಲ್ಲಾ ಅಭಿಮಾನಿಗಳಲ್ಲಿ ಮೂಡಿದೆ.

ಇವರಿಬ್ಬರ ಮಧ್ಯೆ ಯಾವುದೇ ಜಗಳ ಕಿತ್ತಾಟ ಇಲ್ಲದೆ, ಇಬ್ಬರು ಪರಸ್ಪರ ಒಪ್ಪಿಕೊಂಡು ಮ್ಯೂಚುಯಲ್ ರಿವರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ನಿವೇದಿತಾ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌.!

ಇನ್ನು ಚಂದನ್ ಶೆಟ್ಟಿ ಮತ್ತು ನಿವೇದಿತಾ ಇವರಿಬ್ಬರ ಮಧ್ಯದಲ್ಲಿ ಈಗಾಗಲೇ ಕಳೆದ ಒಂದು ವರ್ಷದಿಂದ ಇವರ ಸಂಸಾರದಲ್ಲಿ ಬಿರುಕು ಬಿಟ್ಟಿತ್ತು ಎಂಬ ಮಾಹಿತಿ ಕೂಡ ಇದೀಗ ಹೊರ ಬಂದಿದೆ.

ಆದರೆ ಈ ಸುದ್ದಿ ಮಾತ್ರ ಇಲ್ಲಿವರೆಗೂ ಎಲ್ಲೂ ಹೊರ ಬಂದಿರಲಿಲ್ಲ. ಇದೀಗ ಅವರಿಬ್ಬರೇ ಕೋರ್ಟ್ ಗೆ ಬಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮೇಲೆನೆ ಎಲ್ಲರಿಗೂ ಇವರ ವಿಚ್ಛೇದನ ವಿಷಯ ತಿಳಿದುಬಂದಿದೆ.

ನಿವೇದಿತಾ ಗೌಡ ಮಾಡೆಲ್ ಆಗಿರುವುದರಿಂದ ಅವರಿಗೆ ಮಗು ಬೇಡ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಇವರಿಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗಳು ಈಗ ಉದ್ಭವವಾಗಿವೆ.

ನಿವೇದಿತಾ ಗೌಡ ಅವರಿಗೆ ಮಗು ಬೇಡ ಎಂಬ ಕಾರಣಕ್ಕೆ ಇದೀಗ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರಾ ಎಂಬ ಪ್ರಶ್ನೆಗಳು ಎಲ್ಲರಲ್ಲಿ ಉದ್ಭವವಾಗಿವೆ.

Related