Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಆರ್​ಸಿಬಿ ತಂಡ ಮಾರಾಟ..!?
  • Cricket
  • IPL
  • Sports

ಆರ್​ಸಿಬಿ ತಂಡ ಮಾರಾಟ..!?

admin June 10, 2025 1 minute read
Spread the love

ಬರೋಬ್ಬರಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕಪ್ ಗೆ ಮುತ್ತಿಕ್ಕಿದೆ. ಆದರೆ ಈ ಸಂಭ್ರಮ ಕೇವಲ ಕೆಲವು ಗಂಟೆಗಳು ಮಾತ್ರ ಉಳಿದಿತ್ತು. ಯಾಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನುಪ್ಪಿರುವ ಘಟನೆ ಯಿಂದಾಗಿ ಆರ್​ಸಿಬಿ ಕಪ್ ಗೆದ್ದ ಬಳಿಕ ಸಂಭ್ರಮಾಚರಣೆ ಕೆಲವು ಗಂಟೆಗಳ ಮಾತ್ರ ಇತ್ತು.

ಇನ್ನು ಐಪಿಎಲ್ ಕ್ರಿಕೆಟ್ ಲೇಟೆಸ್ಟ್ ವಿಚಾರ ಏನೆಂದರೆ ಆರ್‌ಸಿಬಿ ಮಾಲೀಕತ್ವ ಬದಲಾಗುತ್ತದೆ ಎಂದು ತಿಳಿದದು ಬಂದಿದೆ.

ಪ್ರಸ್ತುತ ಆರ್​​ಸಿಬಿ ಡಿಯಾಜಿಯೊ ಅಂಗ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್​ನ (USL) ಮಾಲೀಕತ್ವದಲ್ಲಿದೆ. ಕೆಲವು ವರದಿಗಳ ಪ್ರಕಾರ, ಮಾಲೀಕರು ಆರ್​ಸಿಬಿಯನ್ನು ಮಾರಾಟ ಮಾಡಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

ಕೆಲವು ಇನ್ವೆಸ್ಟರ್​ ಜೊತೆ ಆರ್​ಸಿಬಿ ಮಾಲೀಕರು ಮಾತುಕತೆ ನಡೆಸಿದ್ದಾರೆ. ಫ್ರಾಂಚೈಸಿಯ ಮೌಲ್ಯಮಾಪನದ ಬಗ್ಗೆ ಯಾವುದೇ ಅನಧಿಕೃತ ಮಾಹಿತಿಯಿಲ್ಲ. ಒಂದು ಅಂದಾಜಿನ ಪ್ರಕಾರ ಮಾಲೀಕರು ತನ್ನ ಫ್ರಾಂಚೈಸಿಯನ್ನು ಸಂಪೂರ್ಣ ಮಾರಲು ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್​​ (16,834 ಕೋಟಿ ರೂ)ಗೆ ಡಿಮ್ಯಾಂಡ್ ಇಡಬಹುದು ಅಂತಾ ಬ್ಲೂಮ್​ಬರ್ಗ್ ಅಂದಾಜಿಸಿದೆ. ಇದನ್ನೂ ಓದಿ:ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಮಾಡುವ ಬಗ್ಗೆ ಸಿಎಂ ಏನಂದ್ರು?

ಐಪಿಎಲ್​ನ ಒಂದು ಫ್ರಾಂಚೈಸಿ ಆಗಿರುವ ಆರ್​ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಈ ಫ್ರಾಂಚೈಸಿಯು ಐಪಿಎಲ್ ಉದ್ಘಾಟನಾ ವರ್ಷದಿಂದಲೇ ಇದೆ. ಕಿಂಗ್ ಫಿಶರ್ ಏರ್​ಲೈನ್ಸ್​ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ ಅವರು 111.6 ಮಿಲಿಯನ್ ಡಾಲರ್​​ಗೆ ಆರ್​ಸಿಬಿಯನ್ನು ಖರೀದಿ ಮಾಡಿದ್ದರು. ನಂತರದ ದಿನಗಳಲ್ಲಿ ಮಲ್ಯ ಸಾಲದ ಸುಳಿಗೆ ಸಿಲುಕುತ್ತಿದ್ದಂತೆಯೇ, ಅವಕಾಶ ಬಳಸಿಕೊಂಡು ಯುಎಸ್​ಎಲ್ ಆರ್​ಸಿಬಿಯನ್ನು ಖರೀದಿಸಿತು.

 

About the Author

admin

Administrator

Visit Website View All Posts

Spread the love

Post navigation

Previous: ಮುಡಾ ಹಗರಣ: 400 ಕೋಟಿ ಆಸ್ತಿಪಾಸ್ತಿ ಜಪ್ತಿ
Next: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕೈಲಾದಷ್ಟು ಸಹಾಯ: ರಾಮಲಿಂಗ ರೆಡ್ಡಿ

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.