ಬರೋಬ್ಬರಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕಪ್ ಗೆ ಮುತ್ತಿಕ್ಕಿದೆ. ಆದರೆ ಈ ಸಂಭ್ರಮ ಕೇವಲ ಕೆಲವು ಗಂಟೆಗಳು ಮಾತ್ರ ಉಳಿದಿತ್ತು. ಯಾಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನುಪ್ಪಿರುವ ಘಟನೆ ಯಿಂದಾಗಿ ಆರ್ಸಿಬಿ ಕಪ್ ಗೆದ್ದ ಬಳಿಕ ಸಂಭ್ರಮಾಚರಣೆ ಕೆಲವು ಗಂಟೆಗಳ ಮಾತ್ರ ಇತ್ತು.
ಇನ್ನು ಐಪಿಎಲ್ ಕ್ರಿಕೆಟ್ ಲೇಟೆಸ್ಟ್ ವಿಚಾರ ಏನೆಂದರೆ ಆರ್ಸಿಬಿ ಮಾಲೀಕತ್ವ ಬದಲಾಗುತ್ತದೆ ಎಂದು ತಿಳಿದದು ಬಂದಿದೆ.
ಪ್ರಸ್ತುತ ಆರ್ಸಿಬಿ ಡಿಯಾಜಿಯೊ ಅಂಗ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ನ (USL) ಮಾಲೀಕತ್ವದಲ್ಲಿದೆ. ಕೆಲವು ವರದಿಗಳ ಪ್ರಕಾರ, ಮಾಲೀಕರು ಆರ್ಸಿಬಿಯನ್ನು ಮಾರಾಟ ಮಾಡಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.
ಕೆಲವು ಇನ್ವೆಸ್ಟರ್ ಜೊತೆ ಆರ್ಸಿಬಿ ಮಾಲೀಕರು ಮಾತುಕತೆ ನಡೆಸಿದ್ದಾರೆ. ಫ್ರಾಂಚೈಸಿಯ ಮೌಲ್ಯಮಾಪನದ ಬಗ್ಗೆ ಯಾವುದೇ ಅನಧಿಕೃತ ಮಾಹಿತಿಯಿಲ್ಲ. ಒಂದು ಅಂದಾಜಿನ ಪ್ರಕಾರ ಮಾಲೀಕರು ತನ್ನ ಫ್ರಾಂಚೈಸಿಯನ್ನು ಸಂಪೂರ್ಣ ಮಾರಲು ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್ (16,834 ಕೋಟಿ ರೂ)ಗೆ ಡಿಮ್ಯಾಂಡ್ ಇಡಬಹುದು ಅಂತಾ ಬ್ಲೂಮ್ಬರ್ಗ್ ಅಂದಾಜಿಸಿದೆ. ಇದನ್ನೂ ಓದಿ:ಚಿನ್ನಸ್ವಾಮಿ ಕ್ರೀಡಾಂಗಣ ಶಿಫ್ಟ್ ಮಾಡುವ ಬಗ್ಗೆ ಸಿಎಂ ಏನಂದ್ರು?
ಐಪಿಎಲ್ನ ಒಂದು ಫ್ರಾಂಚೈಸಿ ಆಗಿರುವ ಆರ್ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಈ ಫ್ರಾಂಚೈಸಿಯು ಐಪಿಎಲ್ ಉದ್ಘಾಟನಾ ವರ್ಷದಿಂದಲೇ ಇದೆ. ಕಿಂಗ್ ಫಿಶರ್ ಏರ್ಲೈನ್ಸ್ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ ಅವರು 111.6 ಮಿಲಿಯನ್ ಡಾಲರ್ಗೆ ಆರ್ಸಿಬಿಯನ್ನು ಖರೀದಿ ಮಾಡಿದ್ದರು. ನಂತರದ ದಿನಗಳಲ್ಲಿ ಮಲ್ಯ ಸಾಲದ ಸುಳಿಗೆ ಸಿಲುಕುತ್ತಿದ್ದಂತೆಯೇ, ಅವಕಾಶ ಬಳಸಿಕೊಂಡು ಯುಎಸ್ಎಲ್ ಆರ್ಸಿಬಿಯನ್ನು ಖರೀದಿಸಿತು.
