ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವರ ಉನ್ನತ ವ್ಯಾಸಂಗಕ್ಕೆ ಸಹಾಯವಾಗುತ್ತದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಸಲಹೆ ಮಾಡಿದರು.
ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಟಿಎಂ ಹಾಗೂ ಮಡಿವಾಳ ವಾರ್ಡ್ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳಾದ ಎನ್ ಎಸ್ ಪಾಳ್ಯ, ವಿದ್ಯಾ ಜ್ಯೋತಿ ಕನ್ನಡ ಶಾಲೆ, ಬುದ್ಧ ಶಾಲೆ, ತಾವರೆಕೆರೆ, ಉರ್ದು, ಇಂದಿರಾ ಗಾಂಧಿ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯಾರ್ಥಿ ವೇತನ, ನೋಟ್ ಪುಸ್ತಕ, ಬ್ಯಾಗ್ ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದುವ ಕೆಲವು ಬಡ ಮಕ್ಕಳಿಗೆ ಹಣಕಾಸಿನ ಕೊರತೆ ಇರುತ್ತದೆ ಉಳ್ಳವರು ಸಹಾಯ ಮಾಡುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಯಲು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಇದನ್ನೂ ಓದಿ: ಮುಡಾ ಹಗರಣ: 400 ಕೋಟಿ ಆಸ್ತಿಪಾಸ್ತಿ ಜಪ್ತಿ
ನೀವು ಮಾಡುವ ಸಹಾಯ ಒಬ್ಬ ವಿದ್ಯಾರ್ಥಿಯ ಬದುಕನ್ನು ಬೆಳಗಲು ಸಹಕಾರಿಯಾಗುತ್ತದೆ ಅವನು ನಿಮ್ಮನ್ನು ಜೀವನದಿದ್ದಕ್ಕೂ ನೆನೆಯುತ್ತಾನೆ ಎಷ್ಟೇ ಗಳಿಸಿದರು ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಬಾಳಲ್ಲಿ ಬೆಳಕಾಗಿ ಎಂದು ಕರೆ ನೀಡಿದರು.
