ನಟನ ಮೇಲಿನ ಕ್ರೇಜ್‌ನಿಂದ ಖೈದಿ ನಂಬರ್ 6106 ಟ್ರೆಂಡಿಂಗ್‌..!

ನಟನ ಮೇಲಿನ ಕ್ರೇಜ್‌ನಿಂದ ಖೈದಿ ನಂಬರ್ 6106 ಟ್ರೆಂಡಿಂಗ್‌..!

ಬೆಂಗಳೂರು: ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಎಲ್ಲಿಗೆ ಅಧಿಕಾರಿಗಳು ಕೊಲೆಗೀದಾದ ರೇಣುಕಾ ಸ್ವಾಮಿ ಅವರ ಮೊಬೈಲ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಕೊಲೆಗೀಡಾದ ರೇಣುಕಾ ಸ್ವಾಮಿ ಅವರ ಮೊಬೈಲ್  ಹುಡುಕಾಟ ನಡೆಸಿದ್ದಾರೆ.

ನಟ ದರ್ಶನ್ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇನ್ನು ನಟ ದರ್ಶನ್ ಅವರಿಗೆ ಆರೋಪಿ 6106 ನಂಬರನ್ನು ನೀಡಿದ್ದು, ಈ ನಂಬರ್ ಅನ್ನು ಇದೀಗ ದರ್ಶನ ಅಭಿಮಾನಿಗಳು ಮೊಬೈಲ್ ನಂಬರ್ ಮತ್ತು ತಮ್ಮ ವಾಹನಗಳ ನಂಬರ್ ಗಳಾಗಿ ಬಳಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್..!

ಹೌದು, ದರ್ಶನ್ ಖೈದಿ ನಂಬರ್ ಇಟ್ಕೊಂಡು ಕೈ ಮೇಲೆ, ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ, ವಾಹನಗಳ ಮೇಲೂ ಇದೇ ನಂಬರ್. ನಟನ ಮೇಲಿನ ಕ್ರೇಜ್‌ನಿಂದ ಖೈದಿ ನಂಬರ್ 6106 ಮತ್ತೆ ಟ್ರೆಂಡಿಂಗ್‌ನಲ್ಲಿದೆ.

ದರ್ಶನ್ ಏಲ್ಲೇ ಇರಲಿ, ಹೇಗೆ ಇರಲಿ ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಅಂತ ಫ್ಯಾನ್ಸ್ ಮತ್ತೆ ಪ್ರೂವ್ ಮಾಡಿದ್ದಾರೆ. ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಕೈ ಮತ್ತು ಮೈ ಮೇಲೆ ಟ್ಯಾಟೂ ಮಾತ್ರವಲ್ಲ ಕಾರು, ಬೈಕಿನ ಮೇಲಿಯೂ ಕೂಡ ದರ್ಶನ್‌ಗೆ ನೀಡಿರುವ ಖೈದಿ ನಂಬರ್ 6106 ಅನ್ನು ವಾಹನದ ನಂಬರ್ ಪ್ಲೇಟ್‌ಗಳಾಗಿ ಹಾಕಿಸಿಕೊಳ್ತಿದ್ದಾರೆ.

ಒಟ್ಟಿನಲ್ಲಿ ನಡೆ ದರ್ಶನ್ ಸಿನಿಮಾ ಮಾಡಿದ್ರು ಕೂಡ ಶ್ರುತಿ ಹಾಕ್ತಾರೆ ಮತ್ತು ಕೊಲೆ ಮಾಡಿದ್ರು ಕೂಡ ಸುದ್ದಿ ಆಗ್ತಿದ್ದಾರೆ ಎಂಬುದು ಸುಳ್ಳಲ್ಲ..

Related