ಹಾಲಿನ ದರ ಹೆಚ್ಚಳ ಡಿಕೆಶಿ ಹೇಳಿದ್ದೇನೆ..?

ಹಾಲಿನ ದರ ಹೆಚ್ಚಳ ಡಿಕೆಶಿ ಹೇಳಿದ್ದೇನೆ..?

ಮಂಗಳೂರು: ರಾಜ್ಯ ಸರ್ಕಾರ ದಿಡೀರ್ನೆ ಹಾಲಿನ ದರವನ್ನು ಹೆಚ್ಚಳ ಮಾಡಿರುವುದರಿಂದ ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಕುರಿತು ಈಗಾಗಲೇ ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಇನ್ನು ಹಾಲಿನ ದರವನ್ನು ಹೆಚ್ಚಿಗೆ ಮಾಡಿರುವುದು ಕೇವಲ ರೈತರ ಒತ್ತಡಕ್ಕೆ ಮಣಿದೇ ಹೊರತಾಗಿ ರಾಜಕೀಯ ಲಾಭಕಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದನ್ನೂ ಓದಿ: ಇಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ

ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಒತ್ತಡಕ್ಕೆ ಮಣಿದು ನಾವು ಹಾಲಿನ ದರವನ್ನು ಏರಿಕೆ ಮಾಡಿದ್ದೇವೆ ಇದರಿಂದ ರೈತರಿಗೆ ಲಾಭ ಆಗುತ್ತೆ ಹೊರತಾಗಿ ಬೇರೆ ಯಾವ ಉದ್ದೇಶಕ್ಕೂ ಹಾಲಿನ ದರವನ್ನು ನಾವು ಏರಿಕೆ ಮಾಡಿದ ಎಂದು ಹೇಳಿದ್ದಾರೆ.

ಹಾಲಿನ ಬೆಲೆ ಹೆಚ್ಚು ಮಾಡಬೇಕೆಂದು ರೈತರ ಒತ್ತಡವಿತ್ತು. ಹಾಗಾಗಿ ರೈತರ ಒತ್ತಾಯದಿಂದಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

 

Related