ಜೂನ್ 6 ರವರೆಗೆ ಎಸ್ಐಟಿ ಕಸ್ಟಡಿಗೆ ಪ್ರಜ್ವಲ್ ರೇವಣ್ಣ

ಜೂನ್ 6 ರವರೆಗೆ ಎಸ್ಐಟಿ ಕಸ್ಟಡಿಗೆ ಪ್ರಜ್ವಲ್ ರೇವಣ್ಣ

ಬೆಂಗಳೂರು: ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ಈಗ ಎಸ್ಐಟಿ ವಶದಲ್ಲಿದ್ದಾರೆ. ವಿದೇಶದಲ್ಲಿ ತಲೆಮರಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರು ಇಂದು ವಿಚಾರಣೆಗೆಂದು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಈಗಾಗಲೇ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಜೂನ್ 6 ರವರೆಗೆ ಪ್ರಜ್ವಲ್ ಅವರನ್ನ ಎಸ್ಐಟಿ  ಕಸ್ಟಡಿಗೆ ಒಪ್ಪಿಸಬೇಕೆಂದು ಬೆಂಗಳೂರಿನ 42 ನೆಯ ಎಸಿಎಂಎಂ ನ್ಯಾಯಾಲಯ ಇಂದು (ಶುಕ್ರವಾರ ಮೇ 31) ರಂದು ಆದೇಶ ನೀಡಿದೆ. ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಬಂಧನಕ್ಕೆ ಗೃಹ ಸಚಿವರು ಹೇಳಿದ್ದೇನು..?

ಹೆಚ್ಚಿನ ವಿಚಾರಣೆಗೆ 15 ದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಎಸ್ ಐಟಿ ಕೇಳಿತ್ತು, ವಾದ-ವಿವಾದ ಆಲಿಸಿದ ನ್ಯಾಯಾಲಯ 1 ವಾರ ಕಸ್ಟಡಿಯಲ್ಲಿರಿಸಿಕೊಳ್ಳಲು ಅವಕಾಶ ನೀಡಿದೆ.

ಎಸ್ ಐಟಿ ಪರ ನ್ಯಾಯವಾದಿಗಳು ಮತ್ತು ಪ್ರಜ್ವಲ್ ಪರ ವಕೀಲ ಅರುಣ್ ಮಂಡಿಸಿದ ವಾದ-ವಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗಾಗಿ ಜೂನ್ 6ರವರೆಗೆ ಎಸ್ ಐಟಿ ಕಸ್ಟಡಿಗೊಪ್ಪಿಸಿದರು.

 

Related