ಪ್ರಭಾಸ್ ಸಿನಿಮಾ ನೋಡಲು ಜಪಾನ್ ನಿಂದ ಭಾರತಕ್ಕೆ ಬಂದ ಪ್ರಭಾಸ್ ಫ್ಯಾನ್ಸ್

ಪ್ರಭಾಸ್ ಸಿನಿಮಾ ನೋಡಲು ಜಪಾನ್ ನಿಂದ ಭಾರತಕ್ಕೆ ಬಂದ ಪ್ರಭಾಸ್ ಫ್ಯಾನ್ಸ್

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ನಟ ಪ್ರಭಾಸ್ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಬಾಹುಬಲಿ ಚಿತ್ರದ ಮೂಲಕ ಮತ್ತಷ್ಟು ಹೆಸರುವಾಸಿಯಾದ ನಟ ಪ್ರಭಾಸ್ ಅವರು ಇದೀಗ ಕೇವಲ ಭಾರತ ದೇಶವಲ್ಲದೇ ಬೇರೆ ದೇಶದಲ್ಲೂ ಕೂಡ ಪ್ರಭಾಸ್ ಅವರಿಗೆ ಅಭಿಮಾನಿಗಳಿದ್ದಾರೆ ಎಂಬುದು ಇದೀಗ ಸಾಬೀತಾಗಿದೆ.

ಹೌದು, ಒಬ್ಬ ಸಿನಿಮಾ ನಟ ನಟಿಯರಿಗೆ ದೇಶ ಮಂತ್ರವಲ್ಲದೆ ವಿದೇಶದಲ್ಲೂ ಕೂಡ ಅಭಿಮಾನಿಗಳು ಇರುತ್ತಾರೆ ಅದರಂತೆ ಇದೀಗ ನಟ ಪ್ರಭಾಸ್ ಅವರಿಗೂ ಕೂಡ ವಿದೇಶದಲ್ಲಿ ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ಯುವ ಶ್ರೀದೇವಿ ವಿಚ್ಛೇದನ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್

ಇನ್ನು ಪ್ರಭಾಸ್ ನಟನ ‘ಕಲ್ಕಿ 2898 ಎಡಿʼ ಸಿನಿಮಾವನ್ನು ನೋಡಲು ಅಭಿಮಾನಿಗಳು ವಿದೇಶದಿಂದ ಭಾರತಕ್ಕೆ ಬಂದು ಕಲ್ಕಿ 2898 ಎಡಿʼಸಿನಿಮಾವನ್ನು ನೋಡಿದ್ದಾರೆ. ಜಪಾನ್ ನಿಂದ ಕೆಲವರು ಭಾರತ ದೇಶಕ್ಕೆ ಆಗಮಿಸಿ ಕಲ್ಕಿ ಚಿತ್ರವನ್ನು ನೋಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲಾಗುತ್ತಿರುವ ಈ ಫೋಟೋಗಳೇ ಸಾಕ್ಷಿ.

ಇನ್ನು‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ಕಲಾವಿದರು ಅತಿಥಿ ಪಾತ್ರ ಮಾಡಿದ್ದಾರೆ. ಹೀಗಾಗಿ ‘ಕಲ್ಕಿ 2898 ಎಡಿ’ ಸಿನಿಮಾದ ಕ್ರೇಜ್ ದೊಡ್ಡದಾಗಿದೆ. ‘ಕಲ್ಕಿ 2898 ಎಡಿ’ ಚಿತ್ರವನ್ನು ಜಪಾನ್​ನಿಂದ ಆಗಮಿಸಿ ವೀಕ್ಷಿಸಿದ್ದಾರೆ.

ಜಪಾನ್​ನ ಮೂವರು ಹೈದರಾಬಾದ್​ಗೆ ಬಂದಿದ್ದಾರೆ. ಈ ವೇಳೆ ಅವರು ಭೈರವ ಮಾನ್​ಸ್ಟರ್ ಟ್ರಕ್ ಎದುರು ಪೋಸ್ಟರ್ ಹಿಡಿದು ನಿಂತಿದ್ದಾರೆ. ಆ ಬಳಿಕ ಅವರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ಭರ್ಜರಿ ಖುಷಿಪಟ್ಟಿದ್ದಾರೆ. ನಂತರ ಅವರು ಜಪಾನ್​ಗೆ ಮರಳಿದ್ದಾರೆ. ಪ್ರಭಾಸ್​ ಅವರಿಗೆ ಎಷ್ಟೊಂದು ದೊಡ್ಡ ಅಭಿಮಾನಿ ಬಳಗ ಇದೆ ಎಂದು ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.

 

Related