ದರ್ಶನ್ ಕೊಲೆ ಆರೋಪದಲ್ಲಿ ಪವಿತ್ರಾ ಗೌಡ ಹೆಸರು ..!

ದರ್ಶನ್ ಕೊಲೆ ಆರೋಪದಲ್ಲಿ ಪವಿತ್ರಾ ಗೌಡ ಹೆಸರು ..!

ಬೆಂಗಳೂರು: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ಚಿತ್ರದುರ್ಗಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪಕ್ಕೆ ಈಗಾಗಲೇ ದರ್ಶನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ರೇಣುಕಾ ಸ್ವಾಮಿ ಎಂಬುವ ವ್ಯಕ್ತಿಯನ್ನು ದರ್ಶನ್ ಜೊತೆ ಹತ್ತು ಜನ ಸೇರಿಕೊಂಡು ಕೊಲೆ ಮಾಡಿರುವ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

ಇನ್ನು ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಅವರ ಗೆಳತಿಯಾದ ಪವಿತ್ರ ಗೌಡ ಅವರ ಹೆಸರು ಕೂಡ ತಳಕುಗೊಂಡಿದೆ.

ಹೌದು, ಕೊಲೆಗಿಡಾಗಿರುವ ರೇಣುಕಾ ಸ್ವಾಮಿಯವರು ದರ್ಶನ್ ಗೆಳತಿಯಾಗಿರುವ ಪವಿತ್ರ ಗೌಡ ಅವರಿಗೆ ಮೊಬೈಲ್ ನಲ್ಲಿ ಕೆಟ್ಟ ಸಂದೇಶ ಕಳಿಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಶೆಡ್ ಒಂದರಲ್ಲಿ ರೇಣುಕಾ ಸ್ವಾಮಿಯವರನ್ನು ಕೂಡಿ ಹಾಕಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ಇದೀಗ ಪವಿತ್ರ ಗೌಡ ಅವರ ಹೆಸರು ಕೂಡ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದರ್ಶನ್ ಅರೆಸ್ಟ್; ದರ್ಶನ್ ಮನೆ ಮುಂದೆ ಹೈ ಪೊಲೀಸ್ ವ್ಯವಸ್ಥೆ

ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ. ಫೋಟೊ ಕಳಿಸುವುದು ಈ ರೀತಿ ಮಾಡುತ್ತಿದ್ದನಂತೆ ಹೀಗಾಗಿ ರೇಣುಕಾಸ್ವಾಮಿಯನ್ನ ಒಂದು ವಾರದಿಂದ ಟ್ರಾಕ್ ಮಾಡಲಾಗಿತ್ತು.

ಒಂದು ವಾರದಿಂದ ಟ್ರಾಕ್ ಮಾಡಿದ ನಂತರ ರೇಣುಕಾಸ್ವಾಮಿಯನ್ನ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ, ರಾಘವೇಂದ್ರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನಂತೆ. ನಂತ್ರ ಆರ್ ಆರ್ ನಗರ, ವಾಹನ ಸೀಜರ್ ಮಾಡಿ ಇಡುವ ಶೆಡ್ ನಲ್ಲಿ ಇಟ್ಟು ರೇಣುಕಾಸ್ವಾಮಿಯನ್ನ ಹೊಡೆದಿದ್ದಾರೆ. ಹಲ್ಲೆಯಲ್ಲಿ ಗಾಯವಾದ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದ.

ಅದಾದ ನಂತರ ಶನಿವಾರ ನಡುರಾತ್ರಿ ಕಾಮಾಕ್ಷಿ ಪಾಳ್ಯದ  ಸಲಾರ್ ಪುರ ಸತ್ವ ಬಳಿಯ  ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು  ಎಸೆದು ಹೋಗಲಾಗಿದೆ. ದರ್ಶನ್ ರೇಣುಕಾಸ್ವಾಮಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆ ಎನ್ನಲಾಗುತ್ತಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 10 ಜನರನ್ನು ಬಂಧಿಸಲಾಗಿದೆ. ಖ್ಯಾತ ಹೋಟೆಲ್ ಉದ್ಯಮಿ ವಿನಯ್ ಎಂಬಾತನನ್ನು ಕೂಡ ಬಂಧಿಲಾಗಿದೆ. ಜೂ.8 ರ ರಾತ್ರಿ ವಿನಯ್ ಕಾರ್ ಶೆಡ್ ನಲ್ಲಿ ರೇಣುಕಾ ಸ್ವಾಮಿಯನ್ನು ಇಟ್ಟು ಹಲ್ಲೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

 

Related