ಜೈಲು ಹಕ್ಕಿಯಾದ ಪವಿತ್ರಾ ಗೌಡ

ಜೈಲು ಹಕ್ಕಿಯಾದ ಪವಿತ್ರಾ ಗೌಡ

ಬೆಂಗಳೂರು: ಪವಿತ್ರ ಗೌಡ ಮತ್ತು ನಟ ದರ್ಶನ್ ನಡುವೆ ಸ್ನೇಹವಾದೆ ಬಳಿಕ ಪವಿತ್ರ ಗೌಡ ಲಚುರಿ ಲೈಫ್ ಅನ್ನು ನಡೆಸುತ್ತಿದ್ದರು ಆದರೆ ಈಗ ಲಂಚುರಿ ಲೈಫ್ ನಿಂದ ಜೈಲು ಊಟ ತಿನ್ನುವ ಪರಿಸ್ಥಿತಿ ಪವಿತ್ರ ಗೌಡಗೆ ಬಂದಿದೆ. ಹೌದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಅವರು ಈಗ ಜೈಲಿನ ಹಕ್ಕಿಯಾಗಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಗೆಳತಿ ಪವಿತ್ರ ಗೌಡಗೆ ಇಂದಿನಿಂದ ಜೈಲೇ ಗತಿ..!

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್‌ನ ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಒಂದು ದಿನ ಕಳೆದಿರುವ ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್​​ಗೆ ಇಂದು ವಿಚಾರಣಾಧೀನ ಕೈದಿ ನಂಬರ್​ ನೀಡಲಿದ್ದಾರೆ. ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ. ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.

ಪ್ರಕರಣದ ಆರೋಪಿಗಳನ್ನು ಜೈಲಿನ ಕ್ವಾರೆಂಟೈನ್​ಗೆ ಶಿಫ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿಗಳಿಗೆ ಜೈಲಿನ ಊಟದ ಮೆನುವಿನ ಪ್ರಕಾರ ಉಪ್ಪಿಟ್ಟು ಅನ್ನು ಜೈಲು ಸಿಬ್ಬಂದಿ ನೀಡಿದ್ದಾರೆ. ನಿನ್ನೆ ಜೈಲಿಗೆ ತಡವಾಗಿ ಬಂದ ಆರೋಪಿಗಳನ್ನು ಕರೆದುಕೊಂಡ ಬಂದ ಹಿನ್ನೆಲೆಯಲ್ಲಿ ಇಂದು ಪ್ರಕರಣದ ಎಲ್ಲ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಇಂದು ಅಧಿಕಾರಿಗಳು ನೀಡುತ್ತಾರೆ.

Related