ರಾಜ್ಯ ಸರ್ಕಾರದಿಂದ ತೆರಿಗೆ ಬಾಕಿ ವಸೂಲಿಗೆ ಹೊಸ ಪ್ಲಾನ್..!

ರಾಜ್ಯ ಸರ್ಕಾರದಿಂದ ತೆರಿಗೆ ಬಾಕಿ ವಸೂಲಿಗೆ ಹೊಸ ಪ್ಲಾನ್..!

ಬೆಂಗಳೂರು: ರಾಜ್ಯ ಸರ್ಕಾರ ತೆರಿಗೆ ಬಾಕಿ ವಸೂಲಿಗೆ ನೋಟಿಸ್ ನೀಡಿ, ನೀಡಿ ಸುಸ್ತಾಗಿದೆ ಹೋಗಿದ್ದರೂ ಕೂಡ ಸರಿಯಾಗಿ ತೆರಿಗೆ ಬಾಕಿ ವಸೂಲಿ ಸಂಗ್ರಹವಾಗುತ್ತಿಲ್ಲ ಆದ್ದರಿಂದ ರಾಜ್ಯ ಸರ್ಕಾರ ಇದೀಗ ಹೊಸ ಪ್ಲಾನ್ ಒಂದನ್ನು ಮಾಡಿಕೊಂಡಿದೆ.

ಹೌದು, ಆಸ್ತಿ ತೆರಿಗೆ, ನೀರಿನ ಬಿಲ್ಲು ಇನ್ನಿತರ ತೆರಿಗೆ ಬಾಕಿ ವಸುಲಿಗೆ ಇದೀಗ ರಾಜ್ಯ ಸರ್ಕಾರ ಹೊಸ ಹೆಜ್ಜೆಯನ್ನು ಮುಂದಿಟ್ಟಿದೆ. ತೆರಿಗೆ ಬಾಕಿ ವಸೂಲಿಗೆ ರಾಜ್ಯ ಸರ್ಕಾರ ಇದೀಗ ಸ್ವಸಹಾಯ ಸಂಘಗಳ ಮೊರೆ ಹೋಗಿದೆ. ಇದನ್ನೂ ಓದಿ: ಎಚ್ ಡಿಕೆಗೆ ನಮ್ಮನ್ನು ಸ್ಮರಿಸದೆ ಹೋದರೆ ದಿನಚರಿ ನಡೆಯಲ್ಲ ಡಿ.ಕೆ.ಸುರೇಶ್

ರಾಜ್ಯದಲ್ಲಿರುವ ಎನ್‌ಜಿಒ, ಸ್ವಸಹಾಯ ಸಂಘಗಳ ಮೂಲಕ ತೆರಿಗೆ ಬಾಕಿ ವಸೂಲಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಮಾಹಿತಿಯನ್ನು ಸಚಿವ ಸಂಪುಟದಲ್ಲೂ ಕೂಡ ಚರ್ಚೆ ಮಾಡಲಾಗಿದೆ ಎಂಬ ಮಾಹಿತಿ ಇದೀಗ ತಿಳಿದು ಬಂದಿದ್ದು ಇದಕ್ಕೆ ಸಚಿವ ಸಂಪುಟದಲ್ಲೂ ಕೂಡ ಹಸಿರು ನಿಶಾನೆ ಸಿಕ್ಕಿದೆ.

ಸದ್ಯ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಸ್ತಿ ತೆರಿಗೆ ಒಟ್ಟು 1,860.17 ಕೋಟಿ ರೂ. ಬಾಕಿ ಇದೆ. ಇದನ್ನ ವಸೂಲಿ ಮಾಡಲು ಮುಂದಾಗಿರುವ ಸರ್ಕಾರ, ಬಾಕಿ ವಸೂಲಿ ಜವಬ್ದಾರಿಯನ್ನು ಸ್ವಸಹಾಯ ಸಂಘಗಳು ಹಾಗೂ ಎನ್​​ಜಿಒಗಳಿಗೆ ವಹಿಸಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಸ್ವಸಹಾಯ ಸಂಘಗಳಿಗೆ ವಸೂಲಿಯಾದ ಹಣದ ಶೇಕಡ 5 ರಷ್ಟು ಪಾಲನ್ನ ಕಮಿಷನ್ ಆಗಿ ಕೊಡುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್​​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

 

Related