ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

ದೆಹಲಿ: ಇಂದಿನಿಂದ ದೇಶದಾದ್ಯಂತ ಹೊಸ ಮೂರು ಕ್ರಿಮಿನಲ್ ಕಾನೂನುಗಳು ಜಾರಿಯಾಗುವೆ. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಯು ಇಂದಿನಿಂದ ಜಾರಿ ಮಾಡಲಾಗಿದೆ.

ಇದರಿಂದ ದೇಶದಲ್ಲಾಗುತ್ತಿರುವ ಕ್ರಿಮಿನಲ್ ಕೇಸು, ಅತ್ಯಾಚಾರ, ಕೊಲೆ, ಸುಲಿಗೆ ಇನ್ನಿತರ ಪ್ರಕರಣಗಳಿಗೆ ಬ್ರೇಕ್ ಆಗಬಹುದು.

ಹೌದು, ದೇಶದಲ್ಲಿ (ಸೋಮವಾರ ಜುಲೈ 01) ಇಂದಿನಿಂದ ಮೂರು ಕ್ರಿಮಿನಲ್ ಕಾನೂನುಗಳು ಜಾರಿಗೊಳ್ಳುತ್ತಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿಆರ್​​ಪಿಸಿಗೂ ಇಂಡಿಯನ್​ ಎವಿಡೆನ್ಸ್​ ಆ್ಯಕ್ಟ್​​ಗೆ ಬದಲಿಗೆ ಹೊಸ ಕಾನೂನು ಜಾರಿಗೆ ಬರುತ್ತಿವೆ. ಇದನ್ನೂ ಓದಿ: ಬೆಂಗಳೂರಿನಲಿಂದು ಕರವೇ ಕಹಳೆ..!

ಇನ್ನು ಬ್ರಿಟಿಷರ ಕಾಲದ 3 ಕಾನೂನುಗಳಿಗೆ ಗುಡ್​ಬೈ ಹೇಳಿದ ಮೊದಲ ದಿನವೇ ಮೊದಲ ಕೇಸ್ ದಾಖಲಾಗಿದೆ.

ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ 1860ರಲ್ಲಿ ಜಾರಿ ಮಾಡಿದ್ದ ಐಪಿಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಎಂದು, 1898ರಲ್ಲಿ ಜಾರಿಗೆ ಬಂದಿದ್ದ CrPC ಬದಲಿಗೆ ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಎಂದು ಹಾಗೂ 1872ರಲ್ಲಿ ಬಂದಿದ್ದ ಇಂಡಿಯನ್ ಎವಿಡೆನ್ಸ್​ ಆ್ಯಕ್ಟ್​​ ಬದಲಾಗಿ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಮಾಡಲಾಗಿದೆ.

ಈ ಮೂರು ಹೊಸ ಕಾಯ್ದೆಗೆ ಕಳೆದ ವರ್ಷ ಸಂಸತ್​​ನಲ್ಲಿ ಅನುಮೋದನೆ ದೊರೆತಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾತ್ರ ಸದ್ಯಕ್ಕೆ ಜಾರಿಗೊಳಿಸದೆ ಇರಲು ಸರ್ಕಾರ ನಿರ್ಧಾರ ಮಾಡಲಾಗಿದೆ.

ಭಾರತೀಯ ಸಾಕ್ಷ್ಯ ಅಧಿನಿಯಮ. ಈ ಅಧಿನಿಯಮವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ಈ ಅಧಿನಿಯಮದ ಅಡಿಯಲ್ಲಿ ಒಟ್ಟು 11 ಅಧ್ಯಾಯಗಳಿವೆ.

ಭಾಗ 1:- ಸತ್ಯಗಳ ಪ್ರಸ್ತುತತೆಯೊಂದಿಗೆ ವ್ಯವಹರಿಸುತ್ತದೆ. ಈ ಭಾಗದ ಅಡಿಯಲ್ಲಿ ಎರಡು ಅಧ್ಯಾಯಗಳಿವೆ ಮೊದಲ ಅಧ್ಯಾಯವು ಪುರಾವೆಗಳ ಕಾಯಿದೆಯನ್ನು ಪರಿಚಯಿಸುವ ಪ್ರಾಥಮಿಕ ಅಧ್ಯಾಯವಾಗಿದೆ ಮತ್ತು ಎರಡನೆಯ ಅಧ್ಯಾಯವು ನಿರ್ದಿಷ್ಟವಾಗಿ ಸತ್ಯಗಳ ಪ್ರಸ್ತುತತೆಯೊಂದಿಗೆ ವ್ಯವಹರಿಸುತ್ತದೆ.

ಭಾಗ 2, 3 ರಿಂದ 6 ರವರೆಗಿನ ಅಧ್ಯಾಯಗಳನ್ನು ಒಳಗೊಂಡಿದೆ.

ಅಧ್ಯಾಯ 3 ಸಾಬೀತುಪಡಿಸಬೇಕಾಗಿಲ್ಲದ ಸಂಗತಿಗಳೊಂದಿಗೆ ವ್ಯವಹರಿಸುತ್ತದೆ

ಅಧ್ಯಾಯ -4 ಮೌಖಿಕ ಪುರಾವೆಗಳೊಂದಿಗೆ ವ್ಯವಹರಿಸುತ್ತದೆ

ಅಧ್ಯಾಯ -5 ಡಾಕ್ಯುಮೆಂಟರಿ ಪುರಾವೆಗಳೊಂದಿಗೆ ವ್ಯವಹರಿಸುತ್ತದೆ ಮತ್ತು

ಅಧ್ಯಾಯ -6 ಡಾಕ್ಯುಮೆಂಟರಿ ಪುರಾವೆಗಳನ್ನು ಹೊಂದಿರುವ ಸಂದರ್ಭಗಳೊಂದಿಗೆ ವ್ಯವಹರಿಸುತ್ತದೆ ಮೌಖಿಕ ಸಾಕ್ಷ್ಯಕ್ಕಿಂತ ಆದ್ಯತೆ ನೀಡಲಾಗಿದೆ

ಭಾಗ -3 ಕೊನೆಯ ಭಾಗ, ಅಂದರೆ ಭಾಗ 3, ಅಧ್ಯಾಯ 7 ರಿಂದ ಅಧ್ಯಾಯ 11 ಅನ್ನು ಒಳಗೊಂಡಿದೆ

 

ಅಧ್ಯಾಯ -7 ಪುರಾವೆಯ ಹೊರೆಯ ಬಗ್ಗೆ ಮಾತನಾಡುತ್ತದೆ

ಅಧ್ಯಾಯ-8 ಎಸ್ಟೊಪೆಲ್ ಬಗ್ಗೆ ಮಾತನಾಡುತ್ತದೆ

ಅಧ್ಯಾಯ -9 ಸಾಕ್ಷಿಗಳ ಬಗ್ಗೆ ಮಾತನಾಡುತ್ತದೆ

ಅಧ್ಯಾಯ -10 ಸಾಕ್ಷಿಗಳ ವಿಚಾರಣೆಯ ಬಗ್ಗೆ ಮಾತನಾಡುತ್ತದೆ

ಅಧ್ಯಾಯ -11 ರ ಕೊನೆಯ ಅಧ್ಯಾಯವು ಅಸಮರ್ಪಕ ಪ್ರವೇಶ ಮತ್ತು ಸಾಕ್ಷ್ಯವನ್ನು ತಿರಸ್ಕರಿಸುವ ಬಗ್ಗೆ ಮಾತನಾಡುತ್ತದೆ.

Related