ಕೊಡಗಿನ ಸ್ಟೈಲ್ ನಲ್ಲಿ ನ್ಯಾಷನಲ್ ಕ್ರಶ್

ಕೊಡಗಿನ ಸ್ಟೈಲ್ ನಲ್ಲಿ ನ್ಯಾಷನಲ್ ಕ್ರಶ್

ಕೊಡಗು: ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಅವರು ಕೊಡಗಿನ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ರಶ್ಮಿಕ ಮಂದಣ್ಣ ಅವರು ಮೂಲತ ಕೊಡಗಿನವರು ಹಾಗಾಗಿ ಅವರು ಕೊಡಗು ರೀತಿಯಲ್ಲಿ ಸೀರೆ ಉಟ್ಟು ವಿಡಿಯೋ ಒಂದನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೌದು, ರಶ್ಮಿಕ ಮಂದಣ್ಣ ಕನ್ನಡ, ತೆಲುಗು, ಹಿಂದಿ, ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿ ಈಗ ದೇಶದಾದ್ಯಂತ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟಿ ಇವರು. ಇನ್ನು ಕೊಡಗಿನವರಾಗಿರುವುದರಿಂದ ಕೊಡಗಿನಲ್ಲಿ ತಮ್ಮ ಸ್ನೇಹಿತರ ಮದುವೆಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಕೊಡಗಿನ ಸ್ಟೈಲ್ ನಲ್ಲಿ ಸೀರೆ ಉಟ್ಟು ವಿಡಿಯೋವನ್ನು ಮಾಡಿದ್ದಾರೆ. ಇದನ್ನೂ ಓದಿ: ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಿರುವ ಈ ನಟಿ..!

ಯೆಸ್..ಫ್ರೆಂಡ್ ಮದುವೆಗಾಗಿ ರಶ್ಮಿಕಾ ಮಂದಣ್ಣ ಅವರು ಕೊಡಗಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಕೊಡವ ಶೈಲಿಯಲ್ಲಿ ಸೀರೆ ಉಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಮಾತೃಭಾಷೆ ಕೊಡವದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರ. ಕೊಡಗಿನಲ್ಲಿ ಫ್ರೆಂಡ್​ ಮದುವೆಗೆ ಬಂದ್ದೀನಿ. ಕೊಡಗಿನಲ್ಲಿರುವಾಗ ನಿಮ್ಮ ಜೊತೆ ಮಾತನಾಡೋದು ಖುಷಿ ವಿಚಾರ ಹೀಗಾಗಿ ಈ ವಿಡಿಯೋ ಮಾಡಿದ್ದೇನೆ. ನಿಮ್ಮ ಆಶೀರ್ವಾದಿಂದ ಇಷ್ಟು ಮುಂದೆ ಬಂದಿದೀನಿ. ಈಗಲೂ ನಾನು ಕಾವೇರಮ್ಮ ಮತ್ತು ಇಗ್ಗುತಪ್ಪ ಆಶೀರ್ವಾದಿಂದ ಮುಂದುವರಿಯುತ್ತಿದ್ದೇನೆ. ನೀವು ಯಾವಾಗಲೂ ನನಗೆ ಸಪೋರ್ಟ್ ಮಾಡಿದೀರಾ. ಇನ್ನಷ್ಟು ಹಾರ್ಡ್​ವರ್ಕ್ ಮಾಡಿ ನಾನು ಮುಂದೆ ಮತ್ತಷ್ಟು ಸಾಧಿಸುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರ ಸಪೋರ್ಟ್​ಗೆ ಥ್ಯಾಂಕ್ಸ್. ನೀವು ಯಾವಾಗಲೂ ನಮ್ಮ ಮನಸ್ಸಲ್ಲಿ ಇರುತ್ತೀರಾ. ಧನ್ಯವಾದ ಎಂದಿದ್ದಾರೆ ರಶ್ಮಿಕಾ.

ಒಟ್ಟಿನಲ್ಲಿ ಎಲ್ಲೇ ಇದ್ದರೂ ನಾವು ಹುಟ್ಟಿ ಬೆಳೆದ ಬಂದ ದಾರಿಯನ್ನು ನಾವು ಮರೆಯಬಾರದು ನಮ್ಮ ಹುಟ್ಟೂರೇ ನಮಗೆ ಸ್ವರ್ಗ. ಹಾಗಾಗಿ ಯಾರೂ ಕೂಡ ತಮ್ಮ ಹುಟ್ಟುರನ್ನು ಮರೆಯಲು ಸಾಧ್ಯವಿಲ್ಲ ಎಂದು ಇದರಿಂದ ತಿಳಿದು ಬರುತ್ತದೆ.

 

Related