ಮೈಸೂರು ಹಾಲಿ ಮತ್ತು ಮಾಜಿ ಸಂಸದರ ನಡುವೆ ಇರಿಸು ಮರುಸು..!

ಮೈಸೂರು ಹಾಲಿ ಮತ್ತು ಮಾಜಿ ಸಂಸದರ ನಡುವೆ ಇರಿಸು ಮರುಸು..!

ಮೈಸೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶದ ಕುಡಿ ಯದುವೀರ್ ಒಡೆಯರ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವಿನ ನಗೆಯನ್ನು ಬೀರಿದ್ದಾರೆ.

ಇನ್ನು ಮೈಸೂರಿನಲ್ಲಿ ಹಾಲಿ ಸಂಸದ ಮತ್ತು ಮಾಜಿ ಸಂಸದರ ನಡುವೆ ಇದೀಗ ಬಿಗ್ ಪೈಪೋಟಿ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಹೌದು, ಮೈಸೂರಿನಲ್ಲಿ ಹಾಲಿ ಮತ್ತು ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ಅಭಿವೃದ್ಧಿ ಕೆಲಸಕ್ಕಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಚಿವರಿಗೆ ಮನವಿ‌ ಮಾಡಿದ್ದಾರೆ. ಮಾಜಿ ಸಂಸದರಾದರೂ, ಪ್ರತಾಪ್ ಸಿಂಹ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರೈಲ್ವೆ ಸಚಿವ ವಿ.ಸೋಮಣ್ಣರಿಗೆ ಭೇಟಿ ಮಾಡಿ ಮನವಿ‌ ಮಾಡಿದ್ದಾರೆ. ಇದನ್ನೂ ಓದಿ: ಡೆಂಘೀ ಪ್ರಕರಣ ನಿಯಂತ್ರಿಸಲು ಮನೆ-ಮನೆ ಸಮೀಕ್ಷೆ: ತುಷಾರ್ ಗಿರಿ ನಾಥ್

ನಾವು ಸಂಸದರಾಗಿದ್ದ ಕಾಲದಲ್ಲಿ ಅನುಮೋದನೆ ಸಿಕ್ಕಿ, ಪ್ರಧಾನಿಯಿಂದ ಗುದ್ದಲಿ ಪೂಜೆ ನೆರವೇರಿದ್ದ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ದೆಹಲಿಯಲ್ಲಿ ಸಚಿವ ವಿ.ಸೋಮಣ್ಣರನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಮೈಸೂರು ಮುಂಬೈ ನಡುವೆ ಹೊಸ ರೈಲು ಆರಂಭಿಸುವಂತೆಯು ಮನವಿ ಮಾಡಿದ್ದಾರೆ. ಒಂದೆಡೆ ಸಚಿವ ವಿ.ಸೋಮಣ್ಣರನ್ನು ಹಾಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೌಹಾರ್ದಯುತವಾಗಿ ಭೇಟಿ ಮಾಡಿದರೆ, ಇತ್ತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೂಡ ಭೇಟಿ ಮಾಡಿದ್ದಾರೆ. ಮಾಜಿ ಸಂಸದರ ನಡೆ ಕುತೂಹಲ ಮೂಡಿಸಿದೆ.

 

Related