3ನೇ ಬಾರಿಗೆ ಪ್ರಧಾನಿ ಪಟ್ಟಕೇರಿದ ನರೇಂದ್ರ ಮೋದಿ

3ನೇ ಬಾರಿಗೆ ಪ್ರಧಾನಿ ಪಟ್ಟಕೇರಿದ ನರೇಂದ್ರ ಮೋದಿ

ದೆಹಲಿ: ಲೋಕಸಭಾ ಚುನಾವಣೆ 2024ನೇ ಸಾಲಿನಲ್ಲಿ ಎನ್ ಡಿ ಎ ಮೈತ್ರಿಕೂಟ ಸತತ 3ನೇ ಬಾರಿಯಾಗಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಇಂದು (ಜೂನ್‌ 09 ಭಾನುವಾರ ) ಸಂಜೆ 7:30ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ನರೇಂದ್ರ ಮೋದಿಯವರು ಈಶ್ವರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೋದಿಯವರಿಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಟಿಡಿಪಿ, ಜೆಡಿಯು, ಜೆಡಿಎಸ್‌ ಹಾಗೂ ಎಲ್‌ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು. ಸತತ ಮೂರು ಅವಧಿಗೆ ಆಯ್ಕೆಯಾದ 2ನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

Related