ಗೌಂಡಗಾಂವ ಗ್ರಾಮದಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ

ಗೌಂಡಗಾಂವ ಗ್ರಾಮದಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ

ಔರಾದ್: ತಾಲೂಕಿನ ಬೆಳಕುಣಿ(ಚೌಧರಿ) ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೌಂಡಗಾಂವ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಯಾವುದೇ ಗ್ರಾಮದಲ್ಲಿ ಕಾಮಗಾರಿಗಳನ್ನು ಮಾಡದೇ ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಇದರಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಭರತ ಪಾಟೀಲ, ಗೋವಿಂದರಾವ ಲೋಣೆ ಅವರುಗಳು ಆಗ್ರಹಿಸಿದ್ದಾರೆ.

ಅವ್ಯವಹಾರದ ಬಗ್ಗೆ ತನಿಖೆಯನ್ನು ಕೈಗೊಂಡು ಕಠಿಣ ರೀತಿಯಲ್ಲಿ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುವ ಅವರುಗಳು, ಜೂನ್ 28ರಂದು ಅಂಗವಿಕಲರ ಕಲ್ಯಾಣಕ್ಕಾಗಿ ಗೌಂಡಗಾಂವ ಗ್ರಾಮದಲ್ಲಿ ಶೌಚಾಲಯ ಮತ್ತು ಇತರೆ ಹೊಸ ಕಾಮಗಾರಿಗಳಿಗೆ ಮೀಸಲಿಟ್ಟಿದ ಹಣವನ್ನು ಹಳೆ ಕಾಮಗಾರಿಯ ಮೇಲೆ ಸುಣ್ಣಬಣ್ಣ ಮಾಡಿ, ಹೊಸ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳು ಇಡೀ ದೇಶಕ್ಕೆ ಮಾದರಿಯಾಗಬೇಕು: ರಾಮಲಿಂಗ ರೆಡ್ಡಿ

ಈ ಭ್ರಷ್ಟಾಚಾರದಲ್ಲಿ ಸುರೇಶ ಮೋರೆ ವಲಯ ಅಧಿಕಾರಿ, ಎ.ಇ.ಇ. ಸುಭಾಷ ಮತ್ತು ಗ್ರಾಮ ಪಂಚಯತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಪತರಾವ ಮತ್ತು ಕಾರ್ಯದರ್ಶಿ ಆತ್ಮರಾಮ ಅವರುಗಳ ಮೇಲೆ ಕ್ರಮವಹಿಸಬೇಕೆಂದು ಲಿಖಿತ ದೂರು ಸಲ್ಲಿಸಿದ್ದಾರೆ.

ಊರಿನ ಪ್ರತಿಯೊಂದು ಮನೆ ಜಿ.ಪಿ.ಎಸ್. ಮಾಡಲು ರೂ.1000/-, ಎರಡನೇ ಜಿ.ಪಿ.ಎಸ್. ಮಾಡಲು ರೂ.500/-, 3ನೇ ಹಂತಕ್ಕೆ ರೂ.500/- ಮತ್ತು ಅಂತಿಮ ಜಿ.ಪಿ.ಎಸ್. ಮಾಡಲು ರೂ.4000/- ವಂತಿಗೆಯನ್ನು ಆತ್ಮರಾಮ ಪಡೆದುಕೊಳ್ಳುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Related