ಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ: ಸಿಎಂ

ಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ: ಸಿಎಂ

ಜೂನ್: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ನಗರವಾಗಿರುವುದರಿಂದ ಈಗಾಗಲೇ ಈ ಪ್ರಕಾರವನ್ನು ರಾಜ್ಯ ಸರ್ಕಾರ ಎಸ್ಐಟಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿದ್ದು, ಈ  ಹಗರಣದಲ್ಲಿ ಯಾರನ್ನು ರಕ್ಷಿಸುವ ಮಾತೇ ಇಲ್ಲ ಎದ್ದು ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ ನಾಗೇಂದ್ರ ಅವರು ರಾಜೀನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದನ್ನೂ ಓದಿ: ಮುಖ್ಯ ಆಯುಕ್ತರಿಂದ ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ

ವಿಧಾನಸೌಧದಲ್ಲಿ ಇಂದು ವಿಧಾನಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿರುವ  ಬಗ್ಗೆ ಮಾತನಾಡಿ ನಮಗೆ  ಯಾರೂ ಯಾವ ಬೆದರಿಕೆಯೂ ಹಾಕಿಲ್ಲ ಎಂದರು.

ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಬಿಜೆಪಿ ಅವರು ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಜೂನ್ ಆರರವರೆಗೆ ಗಡುವು ನೀಡಿರುವ ಬಗ್ಗೆ   ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಪ್ರಾಥಮಿಕ ವರದಿ ಪಡೆದು ನಂತರ ತೀರ್ಮಾನಿಸಲಾಗುವುದು ಎಂದರು.

ನಮ್ಮ ಅಭ್ಯರ್ಥಿಗಳು ಗೆಲ್ಲಲು 19 ರಿಂದ 20 ಮತಗಳು ಅಗತ್ಯವಿದ್ದು, ಬಿಜೆಪಿಯವರು, ಜೆಡಿಎಸ್ ಅವರು ಒಬ್ಬರಿಗೆ ನಾಮಪತ್ರಗಳ ಪರಿಶೀಲನೆಯ ನಂತರ ತಿಳಿಯಲಿದೆ. ಒಂದು ವೇಳೆ ಜಾಸ್ತಿಯಾದರೆ ಚುನಾವಣೆ ನಡೆಯಬೇಕು. ಚುನಾವಣೆ ನಡೆದರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

 

Related