ಲೋಕಸಭಾ ಚುನಾವಣೆ; ಇಂದು 6ನೇ ಹಂತದ ಮತದಾನ

ಲೋಕಸಭಾ ಚುನಾವಣೆ; ಇಂದು 6ನೇ ಹಂತದ ಮತದಾನ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ದೇಶದಲ್ಲಿ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ.

ಹೌದು, 2024ನೆಯ ಸಾಲಿನ ಲೋಕಸಭಾ ಚುನಾವಣೆಗೆ ಇಂದು ಕೊನೆಯ  ಹಂತದ ಮತದಾನ ನಡೆಯುತ್ತಿದೆ. ಇಂದು ನಡೆಯುತ್ತಿರುವ ಮತದಾನದಲ್ಲಿ ದೇಶದಲ್ಲಿರುವ ಘಟಾನುಘಟಿಗಳ ಭವಿಷ್ಯ ಮತದಾರರ ಕೈಯಲ್ಲಿ ನಿಂತಿದೆ.

ಇನ್ನು ಬೆಳಗ್ಗೆ 9 ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ 16.54% ಮತದಾನವಾಗಿದ್ದು, ಉತ್ತರ ಪ್ರದೇಶದಲ್ಲಿ 12.33% ಮತದಾನವಾಗಿದೆ. ಒಡಿಶಾ ಮತ್ತು ಹರಿಯಾಣದಲ್ಲಿ ಕಳಪೆ ಮತದಾನವಾಗಿದೆ. ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಪ್ರಗತಿಯಲ್ಲಿದೆ. ಒಟ್ಟು 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದನ್ನೂ ಓದಿ: ಐಪಿಎಲ್ 2024; ಈ ಬಾರಿ ಆರೆಂಜ್ ಕ್ಯಾಪ್ ಯಾರ ಪಾಲಿಗೆ..?

ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಾಯಂಕಾಲ 6 ಗಂಟೆಯವರೆಗೆ ಮುಂದುವರಿಯುತ್ತದೆ, ಮುಕ್ತಾಯದ ವೇಳೆಗೆ ಸರದಿಯಲ್ಲಿದ್ದವರಿಗೆ ಇನ್ನೂ ಮತದಾನ ಮಾಡಲು ಅವಕಾಶವಿದೆ.

Related