ಕರುನಾಡು ಮೆಚ್ಚಿ ಕೊಂಡಾಡುತ್ತಿದೆ ಸಿಎಂ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮ

ಕರುನಾಡು ಮೆಚ್ಚಿ ಕೊಂಡಾಡುತ್ತಿದೆ ಸಿಎಂ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮ

ಬೆಂಗಳೂರು: ಈ ಬಾರಿ ವಿಶ್ವಕಪ್ ಟಿ20 ಪಂದ್ಯಾಗಳಯಲ್ಲಿ ಭಾರತ ತಂಡವು ಜಯಭೇರಿಯನ್ನು ಸಾಧಿಸಿದ್ದು, ಈ ಪಂದ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ವಿಮಾನದಲ್ಲಿ ಕೆಲ ನಿಮಿಷಗಳ ಕಾಲ ಟ್ಯಾಬ್ ಮೂಲಕ ವಿಶ್ವಕಪ್ ಟಿ20 ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ.

ಇನ್ನು ಕ್ರಿಕೆಟ್ ವೀಕ್ಷಣೆ ಮಾಡಿದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ರಿಕೆಟ್ ಪ್ರೇಮ ಎದ್ದು ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಕರುನಾಡು ಮೆಚ್ಚಿ ಕೊಂಡಾಡುತ್ತಿದೆ ಸಿಎಂ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮ

ಹೌದು, ಕಳೆದ ಶನಿವಾರ ಟಿ20 ವಿಶ್ವಕಪ್‌ ನ ಫೈನಲ್‌ ನಡೆದು, ಭಾರತ ತಂಡ ರೋಚಕ ಜಯದೊಂದಿಗೆ ವಿಶ್ವಕಪ್‌ ಗೆ ಮುತ್ತಿಕ್ಕಿದೆ. ಪ್ರತಿ ಎಸೆತವೂ ಪಂದ್ಯದ ಗತಿ ಬದಲಿಸುವಂತಿದ್ದುದ್ದರಿಂದ ಇಡೀ ದೇಶವೇ ಫೈನಲ್‌ ಪಂದ್ಯವನ್ನು ನಿಬ್ಬೆರಗಾಗಿ ವೀಕ್ಷಿಸಿದೆ. ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ 9.30ರ ವಿಮಾನ ಹತ್ತಿ ಬೆಂಗಳೂರಿಗೆ ವಾಪಾಸಾಗಬೇಕಿತ್ತು. ಇದೆಲ್ಲದರ ನಡುವೆ ಅವರಿಗೆ ಸಿಕ್ಕಿದ್ದು ಕೆಲವೇ ಕೆಲವು ನಿಮಿಷಗಳು ಮಾತ್ರ, ಅದೇ ಅಲ್ಪ ಬಿಡುವಿನ ಸಮಯದಲ್ಲಿ ವಿಮಾನದ ಬಾಗಿಲಲ್ಲಿ ನಿಂತು ವಿಶ್ವಕಪ್‌ ಟಿ20 ಫೈನಲ್‌ ಪಂದ್ಯ ವೀಕ್ಷಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದರು. ಅದರ ಜೊತೆಗೆ ಭಾರತವು ಸಂಘಟಿತ ಪ್ರದರ್ಶನದ ಮೂಲಕ ವಿಶ್ವಕಪ್‌ ಗೆದ್ದು ಬರಲಿ ಎಂದು ಮನದುಂಬಿ ಹಾರೈಸಿದ್ದರು.

ಈ ರೀತಿ ಸಿದ್ದರಾಮಯ್ಯನವರು ಶೇರ್‌ ಮಾಡಿದ್ದ ವೀಡಿಯೋ ಇದೀಗ ಜಾಲತಾಣದಲ್ಲಿ ಭಾರೀ ಹವಾ ಸೃಷ್ಟಿಸಿದೆ. ಈ ವರೆಗೆ ವೀಡಿಯೋವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ, 1,30,000 ಮಂದಿ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮಕ್ಕೆ ಲೈಕ್‌ ಒತ್ತಿ ಮೆಚ್ಚಿದ್ದಾರೆ. ಸಾವಿರಾರು ಮಂದಿ ಕಮೆಂಟ್‌ ಗಳ ಸುರಿಮಳೆಗೈದು ನಿಮ್ಮ ಕ್ರೀಡಾ ಪ್ರೀತಿಗೆ ನಾವು ಅಭಿಮಾನಿಯಾಗಿದ್ದೇವೆಂದು ಕೊಂಡಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬರ ಸಾಮಾಜಿಕ ಜಾಲತಾಣದಲ್ಲಿ ಹಾಕಲ್ಪಟ್ಟ ಯಾವೊಂದು ವೀಡಿಯೋ ಕೂಡ ಇಷ್ಟು ವೈರಲ್‌ ಆಗಿಲ್ಲ ಎಂಬುದು ಗಮನಾರ್ಹ.

https://www.facebook.com/watch/?v=994453209049348

 

Related