ಮಂಡ್ಯದಲ್ಲಿ ಗೆಲುವು ಸಾಧಿಸಿದ ಜೆಡಿಎಸ್..!

ಮಂಡ್ಯದಲ್ಲಿ ಗೆಲುವು ಸಾಧಿಸಿದ ಜೆಡಿಎಸ್..!

ಮಂಡ್ಯ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೆತ್ರದಲ್ಲಿ ಜೆಡಿಎಸ್  ನ ಅಭ್ಯರ್ಥಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಈ ಬಾರಿ ಸುಮಾರು ಒಂದು ಲಕ್ಷ ಅಂತರಗಳಲ್ಲಿ ಬಹುಮತ ಸಾಧಿಸಿದ್ದಾರೆ.

ಈಗಾಗಲೇ ಬಹುಮತಗಳಿಂದ ಮುನ್ನಡೆಯಲ್ಲಿರುವ ಎಚ್ ಡಿ ಕುಮಾರಸ್ವಾಮಿ ಅವರು ಕೇವಲ ಅಧಿಕೃತವಾಗಿ ಘೋಷಣೆ ಮಾಡುವುದು ಒಂದೇ ಬಾಕಿ ಉಳಿದಿದೆ.

ಹೌದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭರ್ಜರಿ ಜಯಭೇರಿಯನ್ನು ಬಾರಿಸಿದ್ದಾರೆ. ಇದನ್ನೂಓದಿ: ಶಿವಮೊಗ್ಗ ಕ್ಷೇತ್ರದಲ್ಲಿ ಗೆಲ್ಲೋರು ಯಾರು..?

ಕಳೆದ ಬಾರಿ ಸುಮಲತಾ ಅಂಬರೀಶ್​ ವಿರುದ್ಧ ಕಣಕ್ಕಿಳಿದಿದ್ದ ನಿಖಿಲ್​ ಕುಮಾರಸ್ವಾಮಿ ಸೋಲುಂಡಿದ್ದರು. ಈ ಬಾರಿಯಾದರೂ ಪುತ್ರನಿಗೆ ಟಿಕೆಟ್​ ಕೊಡಿಸಿ ಗೆಲ್ಲಿಸೋಣ ಅಂದುಕೊಂಡಿದ್ದ ಹೆಚ್​ಡಿಕೆ ಪಾಲಿಗೇ ಮಂಡ್ಯ ಕ್ಷೇತ್ರದ ಟಿಕೆಟ್​ ಒಲಿಯಿತು. ಬಿಜೆಪಿ ಹೈಕಮಾಂಡ್​ ನಡೆಸಿ ಹಲವು ಕಸರತ್ತುಗಳ ಬಳಿಕ ಸುಮಲತಾ ಅಂಬರೀಶ್​ ಅವರು ಕೊನೆಗೂ ಸ್ಪರ್ಧೆಯಿಂದ ಹಿಂದೆ ಸರಿಯಲು ಒಪ್ಪಿದ್ದರು. ಇದರಿಂದ ಹೆಚ್​ಡಿಕೆ ಹಾದಿ ಸುಗಮವಾಯಿತು.

ಕುಮಾರಸ್ವಾಮಿಯವರ ಪ್ರತಿಸ್ಪರ್ಧಿಯಾಗಿ ಸ್ಟಾರ್ ಚಂದ್ರು ಎಂದೇ ಖ್ಯಾತರಾಗಿರುವ ವೆಂಕಟರಮಣೇಗೌಡ ​ಪೈಪೋಟಿ ನೀಡಿದ್ದು ಸೋಲು ಗೆಲುವಿನ ಲೆಕ್ಕಾಚಾರ ಇನ್ನಷ್ಟೇ ತಿಳಿಯಲಿದೆ. ಪ್ರಸ್ತುತ ಸ್ಟಾರ್​ ಚಂದ್ರು ಹಿನ್ನಡೆಯಲ್ಲಿದ್ದಾರೆ. ಈ ಹಿಂದೆಯೂ 2013 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆ ಆಗಿ ಒಂದು ಬಾರಿ ಸಂಸತ್​ ಭವನದ ಮೆಟ್ಟಿಲೇರಿದ್ದ ಕುಮಾರಸ್ವಾಮಿ ಈಗ ಮತ್ತೆ ಮಂಡ್ಯದಿಂದ ಸ್ಪರ್ಧಿಸಿದ್ದು, ಸಕ್ಕರೆ ನಾಡಿನ ಜನರ ತೀರ್ಪು ಯಾರ ಪರ ಅನ್ನೋದು ಕಾದು ನೋಡುಬೇಕಿದೆ.

 

Related