ಟಿ20; ಇಂದು ಇಂಡಿಯಾ-ಇಂಗ್ಲೆಂಡ್ ಮುಖಾಮುಖಿ

ಟಿ20; ಇಂದು ಇಂಡಿಯಾ-ಇಂಗ್ಲೆಂಡ್ ಮುಖಾಮುಖಿ

ಟಿ20 ವಿಶ್ವಕಪ್ ನಲ್ಲಿ ಇಂದು  ಸೆಮಿಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಯಾವ ತಂಡ ಗೆಲುವಿನ ನಗೆ ಬೀರುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ 20 ವಿಶ್ವಕಪ್  ಸೆಮಿಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್ಗಳ ಅಂತರದಿಂದ ಸೋಲು ಅನುಭವಿಸಿತ್ತು. ಆ ಸೋಲನ್ನು ಇದೀಗ  ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ತೀರಿಸಿಕೊಳ್ಳಲು ಭರ್ಜರಿ ಸಿದ್ದತೆಯಿಂದ ಅಖಾಡಕ್ಕೆ ಇಳಿಯುತ್ತಿದೆ.

ಹೌದು, ಇಂದು (ಗುರುವಾರ ಜೂನ್‌ 27) ರಂದು ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಮುಖಾಮುಖಿಯಾಗಲಿದ್ದು ಗಯಾನಾದ ಪ್ರೊ ವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕ್ಷಣಗಣನೆ ಪ್ರಾರಂಭವಾಗಿದೆ. ಇದನ್ನೂ ಓದಿ: ಟೀಮ್ ಇಂಡಿಯಾಗೆ 47 ರನ್​ಗಳ ಭರ್ಜರಿ ಜಯ

ಇನ್ನು ಅಕ್ಯುವೆದರ್ ವರದಿ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವುದು ಖಚಿತ. ಏಕೆಂದರೆ ಪಂದ್ಯ ಆರಂಭಕ್ಕೂ ಅರ್ಧ ಗಂಟೆ ಮುಂಚೆ, ಅಂದರೆ ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಶೇ.66 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಆ ಬಳಿಕ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, 11 ಗಂಟೆಯ ಬಳಿಕ ಮಳೆಯ ಸಂಭವನೀಯತೆ ಶೇಕಡಾ 75 ರಷ್ಟು ಇರಲಿದೆ ಎಂದು ತಿಳಿಸಲಾಗಿದೆ.

ಇನ್ನು 12 ಗಂಟೆಯ ಬಳಿಕ ಮಳೆ ಕಡಿಮೆಯಾದರೂ, ಶೇ.49 ರಷ್ಟು ವರ್ಷಧಾರೆಯಾಗಲಿದೆ. ಅಲ್ಲದೆ ಮುಂದಿನ ಮೂರು ಗಂಟೆಗಳ ಕಾಲ, ಅಂದರೆ ಸ್ಥಳೀಯ ಸಮಯ 3 PM (12:30 AM IST) ವರೆಗೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಈ ವೇಳೆ ಮಳೆಯ ಸಂಭವನೀಯತೆ 35-40 ಪ್ರತಿಶತದಷ್ಟು ಇರಲಿದೆ ಎಂದು ತಿಳಿಸಲಾಗಿದೆ.

ಇದರಿಂದ ಇಂದು ನಡೆಯಲಿರುವ ಇಂಗ್ಲೆಂಡ್ ಮತ್ತು ಇಂಡಿಯಾ ಪದ್ಯಕ್ಕೆ ಮಳೆ ಆಡಚಣೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Related