ನಮೋ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ..?

ನಮೋ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ..?

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು (ಸೋಮವಾರ ಜೂನ್‌ 10) ರಂದು ಸಂಪುಟ ಸಚಿವರ ಖಾತೆಗಳನ್ನು ಹಂಚಿಕೆ ಮಾಡಲಾಯಿತು. ರಾಜ್ಯದ ಪ್ರಮುಖ ಐದು ಸಂಸದರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆ ಹಂಚಿಕೆ ಆಗಿದೆ..? ರಾಜ್ಯದ ಐವರು ಸಂಸದರಿಗೆ ಸಿಕ್ಕಿದ್ದು ಯಾವ್ಯಾವ ಖಾತೆ  ಎಂಬುದನ್ನು ಖಾತ್ರಿ ಪಡಿಸಿತು. ಕೇಂದ್ರದ ಸಂಪುಟ ದರ್ಜೆ ಸಚಿವರಾಗಿ ಮೂವರು ಸಂಸದರಿಗೆ ಸ್ಥಾನ ನೀಡಲಾಯಿತು.

ಕರ್ನಾಟಕ ರಾಜ್ಯದ ರಾಜ್ಯಸಭೆ ಸದಸ್ಯೆ

ನಿರ್ಮಲ ಸೀತಾರಾಮನ್‌ ರವರಿಗೆ ಈ ಬಾರಿಯೂ  ಕೂಡಾ ಹಣಕಾಸು ಖಾತೆ ಜೊತೆಗೆ ಕಾರ್ಪೋರೇಟ್‌ ವ್ಯವಹಾರ ಖಾತೆ ನೀಡಲಾಗಿದೆ . ಜೆಡಿಎಸ್‌ನ ನಾಯಕ ಕುಮಾರಸ್ವಾಮಿಯು ನೀರಿಕ್ಷಿಸಿದ್ದ ಕೃಷಿ ಖಾತೆ ನೀಡದಿದ್ದರೂ ಬೃಹತ್‌ ಕೈಗಾರಿಕೆ ಖಾತೆ ಜೊತೆಗೆ  ಉಕ್ಕು ಸಚಿವಾಲಯದ ಜವಾಬ್ದಾರಿಯನ್ನುನೀಡಲಾಯಿತು. ಅದೇ ರೀತಿಯಾಗಿ ಮಾಜಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಗೆ ನಾಗರಿಕ ಸರಬರಾಜುದಂತ ದೊಡ್ಡ ಖಾತೆಯ ಜೊತೆಗೆ ಗ್ರಾಹಕ ವ್ಯವಹಾರ ಖಾತೆ ನೀಡಲಾಯಿತು . ಅಲ್ಲದೆ ರಾಜ್ಯದ ಮಂತ್ರಿಗಳಾಗಿ ಬಿಜೆಪಿಯ ಹಿರಿಯ ಸಂಸದ ವಿ. ಸೋಮಣ್ಣ ರವರಿಗೆ ಜಲಶಕ್ತಿ ಮತ್ತು ರೈಲ್ವೇ  ಇಲಾಖೆಯ ರಾಜ್ಯ ಖಾತೆ ನೀಡಲಾಯಿತು. ಇದರ ಜೊತೆಗೆ ರಾಜ್ಯದ ಪ್ರಮುಖ ಮಹಿಳಾ ಸಂಸದೆ ಹಾಗೂ ದಕ್ಷಿಣ ಭಾರತದ ಏಕೈಕ ಬಿಜೆಪಿ ಸಂಸದೆ  ಶೋಭಾ ಕರಂದ್ಲಾಜೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ ನೀಡಲಾಯಿತು . ಇದನ್ನೂ ಓದಿ: ಬೆಂಗಳೂರು ನಗರವಾಸಿಗಳಿಗೆ ಸಿಹಿ ಸುದ್ದಿ..!

ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗಧೀಶ್‌ ಶೆಟ್ಟರ್‌ ರಂತ ಹಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಸಿಗದಿರುವುದು ಬೇಜಾರಿನ ಸಂಗತಿಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯದ ಹಿನ್ನಲೆಯಲ್ಲಿ ಎನ್ ಡಿಎ ಪಕ್ಷಗಳಿಗೆ ಸಚಿವ ಸ್ಥಾನ ನೀಡಲಾಗಿದೆ. ಆದ್ದರಿಂದ ಎಲ್ಲಾ ನಾಯಕರೂ ಅಸಮಾಧಾನವನ್ನು ಹೊರಹಾಕುವುದು ಸರಿ ಅಲ್ಲ ಎಂದು  ಕೇಂದ್ರದ ಬಿಜೆಪಿ ನಾಯಕರು ಹೇಳಿದ್ದಾರೆ.

ಈಗಾಗಲೆ ರಾಜ್ಯ ಸರ್ಕಾರದ ಘೋಷಣೆಯಿಂದಾಗಿ ರಾಜ್ಯದಲ್ಲಿ ಆಹಾರ ಸರಬರಾಜು ಇಲಾಖೆಯಲ್ಲಿ ಧಾನ್ಯಗಳ ಕೊರತೆ ಉಂಟಾಗಿದೆ. ಆಹಾರ ಸರಬರಾಜು ಇಲಾಖೆ ರಾಜ್ಯಕ್ಕೆ ಸಿಕ್ಕಿದ್ದು ವಿ.ಸೋಮಣ್ಣ ರವರು ಕೇಂದ್ರದೊಡನೆ ಮಾತಾಡಿ ರಾಜ್ಯಕ್ಕೆ ಆಹಾರ ಸರಬರಾಜು ಪ್ರಕ್ರಿಯೆ ಸುಲಭಗೊಳಿಸಿ ಸಹಕರಿಸುತ್ತಾರಾ ಎಂದು ಎಲ್ಲರ ಮುಂದಿನ ಪ್ರಶ್ನೆಯಾಗಿದೆ.

ಹಾಗಾದ್ರೆ ಹಲವು ಪ್ರಮುಖ ಖಾತೆ ಪಡೆದಿರುವ ಸಂಸದರು ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Related