ಸಿಎಂ ಪರ ಬ್ಯಾಟ್ ಬೀಸಿದ ಹೆಚ್‌ಸಿ ಮಹಾದೇವಪ್ಪ

ಸಿಎಂ ಪರ ಬ್ಯಾಟ್ ಬೀಸಿದ ಹೆಚ್‌ಸಿ ಮಹಾದೇವಪ್ಪ

ಬೆಂಗಳೂರು: ಕಳೆದ ವಾರ ಸರ್ಕಾರಿ ಕಾರ್ಯಕ್ರಮ ಒಂದರಲ್ಲಿ ಧರ್ಮ ಗುರುಗಳಾದ ಚಂದ್ರಶೇಖರ್ ಸ್ವಾಮೀಜಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನವನ್ನ ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದರು.

ಇನ್ನು ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಹೆಚ್‌ಸಿ ಮಹಾದೇವಪ್ಪ ಅವರು ಪ್ರತಿಕ್ರಿಯೆಸಿದ್ದು, ಸಿಎಂ ಸ್ಥಾನ ಬಿಟ್ಟುಕೊಡಲು ಇದೇನು ಕಡಲೆಪುರಿನ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರ ಬೆಂಬಲ ಕ್ರೋಢಿಕರಿಸಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಕೊಡಿ ಇವರಿಗೆ ಕೊಡಿ ಎನ್ನುವುದಕ್ಕೆ ಸಿಎಂ ಹುದ್ದೆ ಅದೇನು ಕಡಲೆಪುರಿನಾ? ಅದು ನನ್ನ ಕೈಯ್ಯಲ್ಲೂ ಇಲ್ಲ, ಧರ್ಮಗುರುಗಳ ಕೈಯ್ಯಲ್ಲೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಧ್ಯದ ದೊರೆ ವಿಜಯಮಲ್ಯಗೆ ಮತ್ತೊಂದು ಸಂಕಷ್ಟ

2023 ರಲ್ಲಿ ವಿಧಾನಸಭೆ ಚುನಾವಣೆ ನಡೆದು ರಾಜ್ಯದ ಮತದಾರರು ಕಾಂಗ್ರೆಸ್‌ಗೆ 135 ಶಾಸಕರನ್ನು ಆಯ್ಕೆ ಮಾಡಿದರು. ಪಕ್ಷದ ಹೈಕಮಾಂಡ್ ವೀಕ್ಷಕರನ್ನು ಕಳಿಸಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿತು. ಶಾಸಕಾಂಗ ಪಕ್ಷದ ನಾಯಕರ ಸ್ಪರ್ಧೆಯಲ್ಲಿ ಒಬ್ಬೊಬ್ಬ ಶಾಸಕರು ಯಾರು ಆಯ್ಕೆ ಆಗಬೇಕು ಎಂಬುದನ್ನು ಚೀಟಿಯಲ್ಲಿ ಹೆಸರು ಬರೆದುಕೊಟ್ಟಿದ್ದರು. ಇದನ್ನು ಲೆಕ್ಕ ಹಾಕಿದಾಗ ಸಿದ್ದರಾಮಯ್ಯ ಅವರು ಹೆಚ್ಚು ಶಾಸಕರ ಬೆಂಬಲ ಪಡೆದು ಆಯ್ಕೆ ಆಗಿದ್ದಾರೆ ಎಂದರು.

ಸಿಎಂ ಮತ್ತು ಡಿಸಿಎಂ ಹುದ್ದೆಗಳ ಬದಲಾವಣೆ ಬಗ್ಗೆ ಪಕ್ಷದಲ್ಲಿ ಯಾರೇ ಮಾತನಾಡಿದರು ಕೂಡ ಅವರ ವಿರುದ್ದ ನೋಟಿಸ್ ಜಾರಿ ಮಾಡಲಾಗುವುದು ಎಂದು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅದರಂತೆ ಇದೀಗ ಹೆಚ್‌ಸಿ ಮಹಾದೇವಪ್ಪ ಅವರು ಕೂಡ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

Related