ಸರ್ಕಾರಿ ಶಾಲಾ ಮಕ್ಕಳು ಇಡೀ ದೇಶಕ್ಕೆ ಮಾದರಿಯಾಗಬೇಕು: ರಾಮಲಿಂಗ ರೆಡ್ಡಿ

ಸರ್ಕಾರಿ ಶಾಲಾ ಮಕ್ಕಳು ಇಡೀ ದೇಶಕ್ಕೆ ಮಾದರಿಯಾಗಬೇಕು: ರಾಮಲಿಂಗ ರೆಡ್ಡಿ

ಬೆಂಗಳೂರು: ಟಿಎಂ ವಿಧಾನಸಭಾ ಕ್ಷೇತ್ರದಲ್ಲಿರುವ ಜಕ್ಕಸಂದ್ರ, ವೆಂಕಟಾಪುರ, ಕೆ.ಎಸ್.ಆರ್ .ಪಿ ವಸತಿ ಸಮುಚ್ಚಯ ಸರ್ಕಾರಿ ಮಾದರಿ, ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಇಂದು (ಮಂಗಳವಾರ ಜುಲೈ 02) ರಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿಯವರು ನೋಟು ಪುಸ್ತಕಗಳು ಮತ್ತು ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಗಳನ್ನು ವಿತರಣೆ ಮಾಡಿದರು.

ನೋಟ್ ಬುಕ್ ವಿತರಣೆ ಮಾಡಿ ನಂತರ ಮಾತನಾಡಿದ ಅವರು, ಸರಕಾರಿ ಶಾಲಾ ಮಕ್ಕಳು ಇದೀಗ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಇಡೀ ದೇಶದಾದ್ಯಂತ ಮಾದರಿಯಾಗುತ್ತಿದ್ದಾರೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ನಿಮಗೆ ಒದಗಿಸಿರುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳಬೇಕೆಂದು ಹೇಳಿದರು. ಇದನ್ನೂ ಓದಿ: ಸಿಎಂ ಪರ ಬ್ಯಾಟ್ ಬೀಸಿದ ಹೆಚ್‌ಸಿ ಮಹಾದೇವಪ್ಪ

ಈ ಸಂದರ್ಭದಲ್ಲಿ ಕೆ ಎಸ್ ಆರ್ ಪಿ 4ನೇ ಪಡೆ ಕಮಾಡೆಂಟ್ ಕೆ. ಎಸ್. ರಘುನಾಥ್, 9ನೇ ಪಡೆ ಕಮಾಡೆಂಟ್ ಚಂದ್ರಶೇಖರ್, ಸಹಾಯಕ ಕಮಾಂಡೆಂಟ್ ಚಂದ್ರಶೇಖರ್, ಸಂಮತ್, ಮಾಜಿ ಪಾಲಿಕೆ ಸದಸ್ಯರಾದ ಎಂ. ಚಂದ್ರಪ್ಪ, ಕೋರಮಂಗಲ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ  ಶಿವಕುಮಾರ್  ಖಜಾಂಚಿ ಸೊಣ್ಣಪ್ಪ, ಸದಸ್ಯರಾದ ಕೋದಂಡ ರಾಮ ರೆಡ್ಡಿ, ನೀಲಮ್ಮ, ಉಮಾಶಂಕರ್ , ಬ್ಲಾಕ್ ಅಧ್ಯಕ್ಷರಾದ ಗೋವರ್ಧನ ರೆಡ್ಡಿ, ವಾರ್ಡ್ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರಾದ ಸಿ.ಎನ್.ಪಾಟೀಲ್ , ಶ್ರೀಮತಿ ಮೀನಾಕ್ಷಿ, ಶಿಕ್ಷಕಿಯರು,  ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

 

Related