ಗ್ಯಾಸ್ ಸೋರಿಕೆ ನಾಲ್ಕು ಸಾವು; ಸಿಎಂ ಪರಿಹಾರ ನೀಡಿದ್ದೆಷ್ಟು..?

ಗ್ಯಾಸ್ ಸೋರಿಕೆ ನಾಲ್ಕು ಸಾವು; ಸಿಎಂ ಪರಿಹಾರ ನೀಡಿದ್ದೆಷ್ಟು..?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಅನಾಹುತದಲ್ಲಿ ಇಡೀ ಕುಟುಂಬ ಮೃತಪಟ್ಟ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕ್ಕ ಮನೆಯಲ್ಲಿ ವಾಸವಾಗಿದ್ದ ಕುಟುಂಬ ಒಂದು ಎಲ್ ಪಿ ಜಿ ಗ್ಯಾಸ್ ಸೋರಿಕೆಯಾಗಿ ಒಂದೇ ಕುಟುಂಬದ ನಾಲ್ಕು ಜನ ಮೃತಪಟ್ಟಿರುವ ಘಟನೆ (ಬುದುವಾರ ಮೇ 22) ರಂದು ಬೆಳಕಿಗೆ ಬಂದಿದೆ.

ಇನ್ನು ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನು ಒಂದೇ ಕುಟುಂಬದವರು ನಾಲ್ಕು ಜನ ಪ್ರಾಣ ಕಳೆದುಕೊಂಡವರಿಗೆ ಸಂಬಂಧಿಕರಿಗೆ ತಲ ಮೂರು ಲಕ್ಷ ಎಂಬಂತೆ ಒಂದೇ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12 ಲಕ್ಷ ಸ್ಥಳದಲ್ಲೇ ನೀಡಿದ್ದಾರೆ.

ಹೌದು, ಸಂತ್ರಸ್ತರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಮೃತ ಕುಮಾರಸ್ವಾಮಿ ಅವರ ಪೋಷಕರಾದ ತಿಮ್ಮಯ್ಯ ಮತ್ತು ಶಾರದಮ್ಮ ಹಾಗೂ ಪತ್ನಿ ಮಂಜುಳಾ ಅವರ ಪೋಷಕರಾದ ರತ್ನಮ್ಮ ಮತ್ತು ಭದ್ರಪ್ಪ ಅವರಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ಇದು ದುರದೃಷ್ಟಕರ. ಘಟನೆ ಸಂಭವಿಸಿದಾಗ ದಂಪತಿ ಕೊಠಡಿಯಲ್ಲಿ ಮತ್ತು ಅವರ ಹೆಣ್ಣುಮಕ್ಕಳು ಹಾಲ್‌ನಲ್ಲಿ ಮಲಗಿದ್ದರು. ಅದೊಂದು ಚಿಕ್ಕ ಮನೆ. ಅವರ ಪುತ್ರಿಯರಾದ ಅರ್ಚನಾ ಮತ್ತು ಸ್ವಾತಿ ಓದುತ್ತಿದ್ದರು. ಕುಮಾರಸ್ವಾಮಿ ಅವರು ಲಾಂಡ್ರಿ ಅಂಗಡಿ ಹೊಂದಿದ್ದರು. ಅವರ ತಂದೆ-ತಾಯಿ ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿದ್ದೇನೆ ಎಂದರು. ಇದನ್ನೂ ಓದಿ: ದೆಹಲಿ ಸಿಎಂ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

ಮನೆ ಚಿಕ್ಕದಾಗಿರುವುದರಿಂದ (10×20 ಅಡಿ), ಸಾಕಷ್ಟು ಗಾಳಿಯಾಡುತ್ತಿರಲಿಲ್ಲ ಮತ್ತು ಎರಡು ಕಿಟಕಿಗಳು ಮುಚ್ಚಿದ್ದ ಕಾರಣ ಮನೆಯಲ್ಲಿದ್ದ ಮೂರು ಸಿಲಿಂಡರ್‌ಗಳ ಪೈಕಿ ಒಂದರಿಂದ ಎಲ್‌ಪಿಜಿ ಸೋರಿಕೆಯಾಗಿ, ಸಾವು ಸಂಭವಿಸಿದೆ ಎಂದು ಎಫ್‌ಎಸ್‌ಎಲ್ ತಂಡ ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದರು.

Related