ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್- ಜೆಡಿಎಸ್ ಮಧ್ಯೆ ಫೈಟ್

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್- ಜೆಡಿಎಸ್ ಮಧ್ಯೆ ಫೈಟ್

ಕೋಲಾರ: ರಾಜ್ಯದಾದ್ಯಂತ ಇಂದು ಕೆಂಪೇಗೌಡರ 15ನೆಯ ಜಯಂತಿ ಯನ್ನು ರಾಜದಾದ್ಯಂತ ಬಹಳ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನು ಕೋಲಾರ ನಗರದಲ್ಲಿ ಕೆಂಪೇಗೌಡ ಜಯಂತಿ ವೇದಿಕೆಯಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳ ನಡುವೆ ಮಾರ ಮರಿಯಾಗಿದೆ.

ಹೌದು, ಕೆಂಪೇಗೌಡ ಜಯಂತಿ ವೇದಿಕೆ ಎದುರೆ ಮಾರಾ ಮಾರಿಗೆ ಮುಂದಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು. ಮಾಜಿ ಪ್ರಧಾನಿ ದೇವೇಗೌಡ ಹಾಗು ಕೇಂದ್ರ ಸಚಿವ HD ಕುಮಾರಸ್ವಾಮಿ ರನ್ನ ಕೆಂಪೇಗೌಡ ಜಯಂತಿಗೆ ಆಹ್ವಾನ ನೀಡದ ರಾಜ್ಯ ಸರ್ಕಾರ ಹಿನ್ನಲೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಛೇರಿ ಉದ್ಘಾಟನೆ

ವೇದಿಕೆ ಬಳಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಧಿಕ್ಕಾರ ಕೂಗಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು. ನನಗೂ ರಾಜಕೀಯ ಮಾಡೋದಿಕ್ಕೆ ಬರುತ್ತದೆ. ನೋಡ್ತೀರಾ ಎಂದು ಜೆಡಿಎಸ್ ಮುಖಂಡರಿಗೆ ಅವಾಜ್ ಹಾಕಿದ ಕಾಂಗ್ರೆಸ್ ಎಂಎಲ್ ಸಿ ಅನಿಲ್ ಕುಮಾರ್.

ಎಂಎಲ್ ಸಿ ಅನಿಲ್ ಕುಮಾರ್ ವಿರುದ್ಧ ಘೋಷಣೆ ಕೂಗಿದ ಆಕ್ರೋಶ ಹೊರಹಾಕಿದ ಜೆಡಿಎಸ್ ಮುಖಂಡರು. MLC ಗೆ ಬೈತೀರಾ ಎಂದು ಹೊಡೆದಾಟಕ್ಕೆ ಮುಂದಾದ ಕಾಂಗ್ರೆಸ್ ಯುವ ಮುಖಂಡ ಜನಪನಹಳ್ಳಿ ನವೀನ್ ಕುಮಾರ್ ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ತಳ್ಳಾಟ ನೂಕಾಟ.

ಕಾಂಗ್ರೆಸ್ ನಾಯಕರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ ಕೆಲ ಜೆಡಿಎಸ್ ಮುಖಂಡರು. ಕೋಲಾರ ನಗರದ ಪ್ರವಾಸಿ ಮಂದಿರದ ಬಳಿ ಆಯೋಜನೆ ಮಾಡಿರುವ 515 ನೇ ಕೆಂಪೇಗೌಡ ಜಯಂತೋತ್ಸವದ ವೇಳೆ ಘಟನೆ ನಡೆದಿದೆ.

 

Related