ಡಿ ಗ್ಯಾಂಗ್ ಪ್ರಕರಣದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ..!

ಡಿ ಗ್ಯಾಂಗ್ ಪ್ರಕರಣದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ..!

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೋಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರ  ಗೌಡ ಸೇರಿದಂತೆ ಈಗಾಗಲೇ 17 ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಇದೀಗ ಮತ್ತೊಂದು ಮಹತ್ವದ ದಾಖಲೆ ಪೊಲೀಸರಿಗೆ ಸಿಕ್ಕಿದೆ ಎಂಬ ಮಾಹಿತಿ ಇದೀಗ ತಿಳಿದು ಬಂದಿದೆ.

ಹೌದು, ಡಿ ಗ್ಯಾಂಗ್ ಕೋಲೆ ಪ್ರಕರಣಕ್ಕೆ ಈಗ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದು ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಹಲ್ಲೆಯ ವಿಡಿಯೋ ಇದೀಗ ಆರೋಪಿ ವಿನಯ್ ಮೊಬೈಲ್‌ನಲ್ಲಿ ಪತ್ತೆಯಾಗಿದೆ. 3 ಸೆಕೆಂಡಿನ ಒಂದು ವಿಡಿಯೋ ಹಾಗೂ ಫೋಟೋವನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.

ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ. ಈ ವೇಳೆ ವಿಡಿಯೋ ಮಾಡಿ ಆರೋಪಿ ವಿನಯ್‌ಗೆ ದರ್ಶನ್ ಗ್ಯಾಂಗ್ ಕಳುಹಿಸಿತ್ತು. ಈ 3 ಸೆಕೆಂಡ್ ವಿಡಿಯೋ ಹಾಗೂ ಒಂದು ಫೋಟೋ ನೋಡಿದ ಬಳಿಕ ಆರೋಪಿ ವಿನಯ್ ಪಟ್ಟಣಗೆರೆ ಶೆಡ್‌ಗೆ ಬಂದು ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸರ ತನಿಖೆಯಲ್ಲಿ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಇದನ್ನೂ ಓದಿ: ನಟ ದರ್ಶನ್‌ ಮತ್ತೊಂದು ಸಂಕಷ್ಟ; ಏನು ಗೊತ್ತಾ?

ಆರೋಪಿ ವಿನಯ್‌ಗೆ ಈ ವಿಡಿಯೋ ಕಳುಹಿಸಿದ್ದು ಯಾರು ಅನ್ನೋ ಮಾಹಿತಿಯನ್ನು ವಿನಯ್ ಬಾಯ್ಬಿಟ್ಟಿಲ್ಲ. ಇದೀಗ ಎಲ್ಲಾ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲು ತಜ್ಞರಿಗೆ ಕಳುಹಿಸಲಾಗಿದೆ. ಆರೋಪಿಗಳ ಮೊಬೈಲ್ ಮೂಲಕ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯನ್ನು ಪೊಲೀಸರು ಹೇಳಿದ್ದಾರೆ. ಕೆಲ ಆರೋಪಿಗಳ ಮೊಬೈಲ್ ಪತ್ತೆಯಾಗಿಲ್ಲ.

ಹಾಗಾದ್ರೆ ಈಗಲೇ ಪ್ರಕಣದಲ್ಲಿ ಇನ್ನೂ ಯಾರ್ಯಾರು ಬಾಕಿ ಇದ್ದಾರೆ ಹಾಗೂ ಈ ಕೊಲೆ ಪ್ರಕರಣದ ಹಿಂದಿನ ರಹಸ್ಯವೇನು ಎಂದು ಅಧಿಕಾರಿಗಳು ಬಗೆಯುತ್ತಿದ್ದಾರೆ.

Related