ಜಗತ್ತಿನಲ್ಲಿ ಎಲ್ಲಕಿಂತ ದೊಡ್ಡ ಆಯುಧ ಅದು ಶಿಕ್ಷಣ: ಶಾಸಕ ಪ್ರಭುಚೌಹಣ

ಜಗತ್ತಿನಲ್ಲಿ ಎಲ್ಲಕಿಂತ ದೊಡ್ಡ ಆಯುಧ ಅದು ಶಿಕ್ಷಣ: ಶಾಸಕ ಪ್ರಭುಚೌಹಣ

ಔರದ: ಮಹಾರಾಷ್ಟ ಗಡಿ‌ಭಾಗ ಗ್ರಾಮವಾದ ಬಾದಲಗಾಂವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಎಲ್ ಕೆಜಿ ಯುಕೆಜಿ ಹಾಗೂ ಒಂದನೇ ತರಗತಿಯನ್ನು ಶಾಸಕ ಪ್ರಭು ಬಿ ಚೌಹಣ ಅವರು ಉದ್ಘಾಟನೆ ಮಾಡಿದರು.

ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಭುಚೌಹಣ, ತಮ್ಮ ಗ್ರಾಮದಲ್ಲಿಯೇ ಇಂಗ್ಲಿಷ್ ಮಾದ್ಯಮ ತರಗತಿ ಪ್ರಾರಂಭವಾಗಿದೆ ತಾವೆಲ್ಲಾ ತಮ್ಮ ತಮ್ಮ ಮಕ್ಕಳಿಗೆ ಇಲ್ಲಿಯೇ ವಿದ್ಯಾಭ್ಯಾಸ ನೀಡಿ ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ ಕೊಡಿ, ಈ ಜಗತ್ತಿನಲ್ಲಿ ಎಲ್ಲಕಿಂತ ದೊಡ್ಡ ಆಯುಧ ಅದು ಶಿಕ್ಷಣವಾಗಿದೆ ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಎಂದು ತಿಳಿಸಿದರು.

ನಂತರ ಮಾತನಾಡಿದ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಆರ್. ದೊಡಿ, ಸರಕಾರ ಇಂಗ್ಲಿಷ್ ಮಾದ್ಯಮ ತರಗತಿ ಪ್ರಾರಂಭಮಾಡಿದ್ದು ಖುಷಿಯ ಸಂಗತಿ ಹೀಗಾಗಿ ಎಲ್ಲಾ ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳಿ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕೆಂದು ತಿಳಿಸಿದರು.

ಹೊಸ ಕೊಠಡಿ ನಿರ್ಮಾಣ ಮಾಡಿಕೊಡುವಂತೆ ಮನವಿ

ಬಾದಲಗಾಂವ ಶಾಲೆಯ ಎಸ್, ಡಿ, ಎಮ್, ಸಿ ಅಧ್ಯಕ್ಷರಾದ ರಾಮದಾಸ ಪಾಟೀಲ, ಶಾಲೆಯ ಕೊಠಡಿಗಳು ಶಿಥಿಲಗೊಳುತಗತಿವೆ ಮಕ್ಕಳು ಭಯದಲ್ಲಿ ವಿದ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಈ ಕೊಠಡಿಗಳನ್ನು ನೆಲಸಮ ಮಾಡಿ ಆರು ಹೊಸ ಕೊಠಡಿ ನಿರ್ಮಿಸಿಕೊಡಬೇಕೆಂದು ಶಾಸಕ ಪ್ರಭುಚೌಹಣ ಅವರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಶಾಸಕ ಪ್ರಭುಚೌಹಣ ಖಂಡಿತವಾಗಿ ಹೊಸ ಕೊಠಡಿ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಬದಲ್ಲಿ ಶಾಲೆ ಅಧ್ಯಕ್ಷರಾದ ರಾಮದಾಸ ಪಾಟೀಲ, ಇಸಿಓ ಸಂಜು ಮೇತ್ರೆ ಬಲ ಭೀಮ್ ಕುಲಕರ್ಣಿ, ಈಶ್ವರ್ ಕ್ಯಾದೆ, ಮಾದೇವ ಘೊಳೇ, ಶಿವಾಜಿರಾವ ಪಾಟಿಲ, ಗ್ರಾಮ ಪಂಚಾಯತ ಸದಸ್ಯರಾದ ಛಬ್ಬುಬಾಯಿ, ಸೋಪನ್ ರಾವ್ ಶೇರಿಕಾರ, ಹಾಗೂ ಊರಿನ ಮುಖಂಡರಾದ ಜನಾರ್ಧನ್ ಪಾಟೀಲ್, ಉದ್ದೋಪಾಟೀಲ್, ಕಿಶನ್ ರಾಠೋಡ, ಗೌತಮ, ದೇವಿದಾಸ ಕಾಂಬಳೆ, ಜ್ಞಾನೋಬಾಭಾಸ್ಕರೆ, ಹಣಮಂತ, ಪಂಢರಿನಾಥ ಹಂಬಲಪೂರೆ, ದಾಮೊದಾರ ಸೇರಿಕಾರ,ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಾರ್ಥಾ ಬಾಯಿ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಶಾಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related