ಟೀಮ್ ಇಂಡಿಯಾ ಮುಂದಿನ ಟಾರ್ಗೆಟ್ ಏನು ಗೊತ್ತಾ..?

ಟೀಮ್ ಇಂಡಿಯಾ ಮುಂದಿನ ಟಾರ್ಗೆಟ್ ಏನು ಗೊತ್ತಾ..?

ಟಿ20 ವಿಶ್ವಕಪ್ 2024ರಲ್ಲಿ ಇನ್ ಇಂಡಿಯಾ ಗೆಲುವಿನ ನಗೆ ಬೇರಿದ್ದು, ಇದರಿಂದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಇಡೀ ಜಗತ್ತಿನಾದ್ಯಂತ ಸಂಭ್ರಮಪಟ್ಟಿದ್ದಾರೆ.

ಇನ್ನು ಟಿ 20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ಪ್ರತಿಷ್ಠಿತ ಆಟಗಾರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾದರೂ ಇದೀಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಮುಂದುವರಿಯಲಿದ್ದಾರೆ.

ಯೆಸ್‌… ಮುಂಬರುವ ಚಾಂಪಿಯನ್ಸ್ ಟ್ರೋಫಿವರೆಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಖಚಿತಪಡಿಸಿದ್ದಾರೆ. ಹೀಗಾಗಿ 2025 ರವರೆಗೆ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿದಾಯ ಹೇಳುವುದಿಲ್ಲ ಎಂದೇ ಹೇಳಬಹುದು. ಇದನ್ನೂ ಓದಿ: ಟಿ20 ವಿಶ್ವಕಪ್; ಫೈನಲ್ ಪಂದ್ಯಕ್ಕೆ ಕ್ಷಣಗಣನೆ

8 ತಂಡಗಳ ಕದನ:

2024 ರ ವಿಶ್ವಕಪ್​ ಕದನದಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ತಂಡದ ಮುಂದಿನ ಗುರಿ ಚಾಂಪಿಯನ್ಸ್ ಟ್ರೋಫಿ 2025. ಮುಂದಿನ ವರ್ಷ ಫೆಬ್ರವರಿ-ಮಾರ್ಚ್​ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ.

ಭಾರತ

ಪಾಕಿಸ್ತಾನ್

ಸೌತ್ ಆಫ್ರಿಕಾ

ನ್ಯೂಝಿಲೆಂಡ್

ಅಫ್ಘಾನಿಸ್ತಾನ್

ಇಂಗ್ಲೆಂಡ್

ಬಾಂಗ್ಲಾದೇಶ್

ಆಸ್ಟ್ರೇಲಿಯಾ

ಈ ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಏಕದಿನ ಟೂರ್ನಿ ನಡೆಯಲಿದೆ. ಇಲ್ಲಿ 8 ತಂಡಗಳು ಬಲಿಷ್ಠವಾಗಿರುವ ಕಾರಣ ಮೊದಲ ಸುತ್ತಿನಿಂದಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಕಳೆದ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಸೋಲನುಭವಿಸಿದ್ದ ಭಾರತ ತಂಡವು ಮುಂದಿನ ವರ್ಷ ಮತ್ತೆ ಏಕದಿನ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಆಗುವ ಅವಕಾಶ ಹೊಂದಿದ್ದು, ಈ ಮೂಲಕ ಚಾಂಪಿಯನ್ಸ್ ಟ್ರೋಫಿಯ ಬರವನ್ನು ಟೀಮ್ ಇಂಡಿಯಾ ನೀಗಿಸಲಿದೆಯಾ ಕಾದು ನೋಡಬೇಕಿದೆ.

ಒಟ್ನಲ್ಲಿ ಟಿ ಟ್ವೆಂಟಿ ವಿಶ್ವ ಕಪ್ 2024 ನಲ್ಲಿ ಟೀಮ್ ಇಂಡಿಯಾ ಟ್ರೋಫಿಯನ್ನು ಗೆದ್ದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ಪಡಿಸಿದೆ.

Related