ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಂಘಿ ಪ್ರಕರಣಗಳು..!

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಂಘಿ ಪ್ರಕರಣಗಳು..!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ಡೆಂಘಿ ಪ್ರಕರಣಗಳು ಹೆಚ್ಚಾಗಿ ಕಾಣುತ್ತಿರುವುದರಿಂದ ನಗರದಲ್ಲಿ ವಾಸಿಸುತ್ತಿರುವ ಜನರಲ್ಲಿ ಸಂಕಷ್ಟ ಹೆಚ್ಚಾಗಿದೆ.

ಹೌದು, ಬಿರು ಬಿಸಿಲಿನ ಮದ್ಯ ಅಲ್ಲಲ್ಲಿ ಮಳೆಯಾಗುತ್ತಿದ್ದು ಈಗ ನಗರದಲ್ಲಿ ಹೆಚ್ಚಾಗಿ ಡೆಂಘಿ ಸಮಸ್ಯೆ ಕಾಣುತ್ತಿದೆ.

ಒಂದು ತಿಂಗಳಿನಲ್ಲಿ ಸಾವಿರಾರು ಡೆಂಘಿ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಮಳೆಯಿಂದಲೂ ಡೆಂಘಿ ಪ್ರಕರಣ  ಹೆಚ್ಚಾಗುತ್ತಿದೆಯಂತೆ. ಪ್ರತಿನಿತ್ಯ 50-60 ಪ್ರಕರಣಗಳು ನಗರದ ನಾನಾ ಭಾಗಗಳಲ್ಲಿ ದಾಖಲಾಗುತ್ತಿವೆ. ಏಪ್ರಿಲ್ ನಿಂದ ಮೇ 10ರವೆಗೆ ಪಾಲಿಕೆ ವ್ಯಾಪ್ತಿಯಲ್ಲಿ 930 ಪ್ರಕರಣ ದಾಖಲಾಗಿವೆ

ಒಟ್ಟು 1974 ಟೆಸ್ಟ್ ಗಳಲ್ಲಿ 930 ಜನರಿಗೆ ಡೆಂಘಿ ಪಾಸಿಟಿವ್ ಬಂದಿದೆ. ಇನ್ನು ರಾಜ್ಯದಲ್ಲಿ ಒಟ್ಟು 2,500 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಮಳೆಯ ಹಿನ್ನೆಲೆ ಡೆಂಘಿ ನಿರ್ಲಕ್ಷ್ಯ ಮಾಡಿದ್ರೆ ಇನ್ನೂ ಹೆಚ್ಚಳ ಸಾಧ್ಯತೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಗಮನಾರ್ಹವೆಂದರೆ ನಗರದ ಸೌತ್ ಝೋನ್ ನಲ್ಲಿ ಅತಿಹೆಚ್ಚು 453 ಪ್ರಕರಣಗಳು ದಾಖಲುಗೊಂಡಿವೆ. ಡೆಂಘಿ ಪ್ರಕರಣ ತಾಂಡವವಾಡುತ್ತಿರುವುದು ಆರೋಗ್ಯ ಇಲಾಖೆಗೆ ಇದೀಗ ತಲೆ ಬಿಸಿಯಾಗಿದೆ. ಡೆಂಘಿ ತಡೆಗೆ ಬಿಬಿಎಂಪಿ ಪಾಲಿಕೆ ಮುಂದಾಗಿದೆ.

 

Related