ಮಾರುಕಟ್ಟೆಯಲ್ಲಿ ಟೊಮೇಟೊಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಮಾರುಕಟ್ಟೆಯಲ್ಲಿ ಟೊಮೇಟೊಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಕೋಲಾರ: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದಂತೆ ತರಕಾರಿ, ಸೊಪ್ಪು ಇನ್ನಿತರ  ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಗ್ರಾಹಕರಿಗೆ ಬರೆಯಲದಂತಾಗಿದೆ.

ಹೌದು, ಕರ್ನಾಟಕ ರಾಜ್ಯದಲ್ಲಿ ಕಳೆದು ಒಂದು ತಿಂಗಳಿಂದ ಮುಂಗಾರು ಮಳೆ ಅಲ್ಲಲ್ಲಿ ಬೀಳುತ್ತಿರುವುದರಿಂದ ತರಕಾರಿಗಳ ಬೆಲೆ ಗಗನಕ್ಕೆ ಏರುತ್ತಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಕೆಂಪು ರಾಜ, ಅಂದರೆ ಟೊಮೆಟೊ ಹಣ್ಣಿನ ಬೆಲೆ ಮತ್ತೆ ಇದೀಗ ಏರಿಕೆ ಆಗಿರುವುದರಿಂದ ಕೆಂಪು ಸುಂದ್ರಿ ಮಾರುಕಟ್ಟೆಯಲ್ಲಿ ಮಿಂಚುತ್ತಿದ್ದಾಳೆ.

ಟೊಮೇಟೊ ಬೆಲೆ ಏರಿಕೆ ಕಾಣುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಟೊಮೇಟೊ ಬೆಲೆ ಗ್ರಾಹಕರಿಗೆ ಬೇಸರ ತಂದಿದೆ. ಮಳೆ ಹೀಗೆ ಮುಂದುವರೆದರೆ ಟೊಮೇಟೊ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಚಂದನ್-ನಿವಿ ವಿಚ್ಛೇದನ ಅರ್ಜಿ ಸಲ್ಲಿಸಿದ ಮೇಲೆಯೂ ಜೊತೆಗೆ ಸುದ್ದಿಗೋಷ್ಠಿ..!

ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಟೊಮೇಟೊ ಮಾರುಕಟ್ಟೆಯಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೇಟೊ ಬೆಲೆ 60 ರೂಪಾಯಿ ಇದೆ. ಹದಿನೈದು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೇಟೊ ಈಗ 60ರೂ ಆಗಿದೆ. ಕಳೆದ ಒಂದು ವಾರದ ಹಿಂದೆ 250 ರೂಪಾಯಿ ಇದ್ದ ಬಾಕ್ಸ್ ಟೊಮೇಟೊ ಈಗ 900 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದೊಂದು ವಾರದಿಂದ ಸುರಿದ‌ ಮಳೆಯ ಎಫೆಕ್ಟ್ ಟೊಮೇಟೊ ಬೆಲೆಯಲ್ಲಿ ದಾಖಲೆಯ ಏರಿಕೆ ಕಾಣುವಂತೆ ಮಾಡಿದೆ. ಮಾರುಕಟ್ಟೆಗೆ ಬರುವ ಟೊಮೇಟೊ ಕಡಿಮೆಯಾದ ಹಿನ್ನೆಲೆ ಬೆಲೆ ಏರಿಕೆಯಾಗಿದೆ.

ವರ್ಷದ ಹಿಂದೆ ಇದೇ ರೀತಿ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಟೊಮೇಟೊ ಬೆಲೆ ಗಗನಕ್ಕೆ ಏರಿಕೆತ್ತು. ಐದು, 10ರೂಗೆ ಸಿಗುತ್ತಿದ್ದ ಟೊಮೇಟೊ 200ರೂ ಕೆಜಿ ಆಗಿತ್ತು. ಸುಮಾರು ಎರಡು ತಿಂಗಳ ಕಾಲ ಟೊಮೇಟೊ ಬೆಲೆ ಕೆಜಿಗೆ 200 ರೂ. ದಾಟಿತ್ತು. ಈ ವೇಳೆ ಅನೇಕ ಟೊಮೇಟೊ ಬೆಳೆಗಾರರು ಭಾರಿ ಲಾಭ ಪಡೆದಿದ್ದರು. ಈ ಬಾರಿ ಮಳೆ ಹೆಚ್ಚಾಗಿರುವ ಕಾರಣ ರಫ್ತು ಕಡಿಮೆ ಆಗಿ ಟೊಮೇಟೊ ಬೆಲೆ ಏರಿದೆ.

 

Related