ಮೂರನೇ ಬಾರಿಗೆ ಸಿಲಿಂಡರ್ ಬೆಲೆ ಏರಿಕೆ

ಮೂರನೇ ಬಾರಿಗೆ ಸಿಲಿಂಡರ್ ಬೆಲೆ ಏರಿಕೆ

ಬೆಂಗಳೂರು : ಆರ್ಥಿಕ ಸಂಕಷ್ಟದಿಂದ ಈಗಾಗಲೇ ತತ್ತರಿಸುತ್ತಿರುವ ಜನ ಸಾಮಾನ್ಯರಿಗೆ ಇಂದು ಮತ್ತೊಂದು ಶಾಕ್ ಸಿಕ್ಕಿದೆ. ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನತೆಗೆ ಇಂದು ಸಿಲಿಂಡರ್ ಬೆಲೆಯ ಹೆಚ್ಚಳದ ಶಾಕ್ ಸಿಕ್ಕಿದೆ. ಮಹತ್ವದ ಸಂಗತಿಯೆಂದರೇ ಫೆಬ್ರವರಿಯೊಂದರಲ್ಲೇ ಮೂರನೇ ಬಾರಿಗೆ ಗೃಹ ಬಳಕೆ ಸಿಲಿಂಡರ್ ದರ ಏರಿಕೆಯಾಗಿದೆ.

14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್ ದರ ಇಂದು 25 ರೂ. ಏರಿಕೆಯಾಗಿದ್ದು, ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಪ್ರತಿ ಸಿಲಿಂಡರ್ ದರ ಈಗ 794 ರೂಪಾಯಿ ತಲುಪಿದೆ. ಬುಧವಾರವಷ್ಟೇ 769 ರೂ. ಗಳಿದ್ದ ಸಿಲಿಂಡರ್ ದರ ಈ ಏರಿಕೆಯಿಂದಾಗಿ 794 ರೂಪಾಯಿಗಳಾಗಿದೆ.

ಈ ಹಿಂದೆ ಅಂದರೆ ಫೆ.4 ರಂದು ಗೃಹ ಬಳಕೆ ಸಿಲಿಂಡರ್ ದರವನ್ನು 25 ರೂ. ಏರಿಕೆ ಮಾಡಲಾಗಿತ್ತು. ಆ ಬಳಿಕ ಫೆ.15 ರಂದು 50 ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 25 ರೂ.ಏರಿಕೆ ಮಾಡಲಾಗಿದ್ದು, ಫೆಬ್ರವರಿ ತಿಂಗಳೊAದರಲ್ಲೇ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾದಂತಾಗಿದೆ.

Related