ಸೂರಜ್ ರೇವಣ್ಣಗೆ ಕಸ್ಟಡಿ ಅವಧಿ ವಿಸ್ತರಣೆ

ಸೂರಜ್ ರೇವಣ್ಣಗೆ ಕಸ್ಟಡಿ ಅವಧಿ ವಿಸ್ತರಣೆ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂದಿತರಾಗಿರುವ ವಿಧಾನ ಪರಿಷತ್ ಸದಸ್ಯರಾಗಿರುವ ಸೂರಜ್ ರೇವಣ್ಣ ಅವರಿಗೆ ಈಗಾಗಲೇ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಜುಲೈ  ಮೂರರ ವರೆಗೂ ಕೂಡ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನು ಜಾರಿ; ಗೃಹ ಸಚಿವರು ಹೇಳಿದ್ದೇನು..?

ಹೌದು, ಸೂರಜ್ ರೇವಣ್ಣ ಅವರು  ಯುವಕ ಒಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಇದೀಗ ನ್ಯಾಯಾಂಗ ಬಂದನದಲ್ಲಿರುವ ಸೂರಜ್ ರೇವಣ್ಣ ಅವರಿಗೆ ಮತ್ತೆ ಜುಲೈ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಬೇಕೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿರುವುದರಿಂದ ಸೂರಜ್ ರೇವಣ್ಣ ಅವರು ಜುಲೈ 3ರವರೆಗೂ ಕೂಡ ನ್ಯಾಯಾಂಗ ಬಂದರೆ ಇರಬೇಕಾಗಿದೆ.

ಇನ್ನು ಮಹಜರು ಸಂದರ್ಭದಲ್ಲಿ ಆರೋಪಿಯ ಮೂಲ ಮೊಬೈಲ್ ಫೋನ್ ಹಾಗೂ ಕೆಲ ಕೂದಲಿನ ಮಾದರಿ ದೊರೆತಿರುವುದರಿಂದ, ಸೂರಜ್ ಅವರ ಧ್ವನಿ ಹಾಗೂ ಕೂದಲಿನ ಮಾದರಿಯನ್ನ ಪಡೆಯಬೇಕಿದೆ. ಆದ್ದರಿಂದ ಕನಿಷ್ಠ 4 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಆದರೆ ‘ಧ್ವನಿ ಹಾಗೂ ಕೂದಲಿನ ಮಾದರಿ ಸಂಗ್ರಹಿಸಲು 4 ದಿನಗಳ ಕಸ್ಟಡಿ ಅಗತ್ಯವಿದೆಯಾ?’ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ಸೂರಜ್ ರೇವಣ್ಣ ಅವರ ಎಸ್ಐಟಿ ಕಸ್ಟಡಿಯನ್ನ ಜುಲೈ 3ರ ವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.

 

Related